'ಲಾಕ್‌ಡೌನ್, ನೈಟ್ ಕರ್ಫ್ಯೂ ಕೊರೊನಾ ನಿಯಂತ್ರಣಕ್ಕೆ ಹೊರತು ಭಯಭೀತರನ್ನಾಗಿಸಲಲ್ಲ' :ಅಶೋಕ ಗೆಹ್ಲೋಟ್ - BC Suddi
‘ಲಾಕ್‌ಡೌನ್, ನೈಟ್ ಕರ್ಫ್ಯೂ ಕೊರೊನಾ ನಿಯಂತ್ರಣಕ್ಕೆ ಹೊರತು ಭಯಭೀತರನ್ನಾಗಿಸಲಲ್ಲ’ :ಅಶೋಕ ಗೆಹ್ಲೋಟ್

‘ಲಾಕ್‌ಡೌನ್, ನೈಟ್ ಕರ್ಫ್ಯೂ ಕೊರೊನಾ ನಿಯಂತ್ರಣಕ್ಕೆ ಹೊರತು ಭಯಭೀತರನ್ನಾಗಿಸಲಲ್ಲ’ :ಅಶೋಕ ಗೆಹ್ಲೋಟ್

ಜೈಪುರ: “ಭಾರತದಲ್ಲಿ ಆತಂಕ ಸೃಷ್ಠಿಸುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಲಾಕ್‍ ಡೌನ್, ನೈಟ್ ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೆ ಹೊರತು ಜನಸಾಮಾನ್ಯರನ್ನು ಹಾಗೂ ಕಾರ್ಮಿಕರನ್ನು ಭಯಭೀತರನ್ನಾಗಿಸಲು ಅಲ್ಲ” ಎಂದು ರಾಜಸ್ಥಾನ ಮುಖ್ಯ ಮಂತ್ರಿ ಅಶೋಕ ಗೆಹ್ಲೋಟ್ ಹೇಳಿದ್ದಾರೆ.

ಈ ಕುರಿತು ತಜ್ಞರೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, “ಸದ್ಯದ ಪರಿಸ್ಥಿತಿ ತುಂಬಾ ಆತಂಕಕಾರಿ ಹಾಗೂ ಅಪಾಯಕಾರಿಯಾಗಿದ್ದು, ಎಲ್ಲರೂ ನೂತನ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕೊರೊನಾ ಪ್ರಕರಣಗಳ ಹಾಗೂ ಸಾವುಗಳ ಸಮಖ್ಯೆ ಕಡಿಮೆ ಮಾಡಲು ರಾಜ್ಯಾದ್ಯಂತ ಕಳೆದ ರಾತ್ರಿಯಿಂದ ನೂತನ ಮಾರ್ಗಸೂಚಿಗಳನ್ನು ಜಾರಿಮಾಡಲಾಗಿದೆ ಎಂದಿದ್ದಾರೆ.

ಕಳೆದ ವರ್ಷದ ಲಾಕ್ ಡೌನ್‍ನಿಂದ ಕಾರ್ಮಿಕರು ಭಯಗೊಂಡಿದ್ದು, ಕಾರ್ಮಿಕರನ್ನು ದೃಷ್ಟಿಯಲ್ಲಿಕೊಂಡು ಸೋಮವಾರ ನೂತನ ನಿಯಮಾವಳಿಗಳನ್ನು ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಟಿ ಸಮೀರಾ ರೆಡ್ಡಿ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು