ಉತ್ತರ ಪ್ರದೇಶದಲ್ಲಿ ಭಾನುವಾರದಿಂದಲೇ​ ಲಾಕ್​ಡೌನ್​ ಜಾರಿ - BC Suddi
ಉತ್ತರ ಪ್ರದೇಶದಲ್ಲಿ ಭಾನುವಾರದಿಂದಲೇ​ ಲಾಕ್​ಡೌನ್​ ಜಾರಿ

ಉತ್ತರ ಪ್ರದೇಶದಲ್ಲಿ ಭಾನುವಾರದಿಂದಲೇ​ ಲಾಕ್​ಡೌನ್​ ಜಾರಿ

ಉತ್ತರಪ್ರದೇಶದಲ್ಲಿ ಕೊರೊನಾ ಮಿತಿ ಮೀರುತ್ತಿರುವ ಹಿನ್ನೆಲೆ ಭಾನುವಾರದಂದು ಸಂಪೂರ್ಣ ಲಾಕ್​ಡೌನ್​ ಮಾಡುವಂತೆ ಸಿಎಂ ಯೋಗಿ ಆದಿತ್ಯನಾಥ್​ ಅವರು ಆದೇಶ ಹೊರಡಿಸಿದ್ದಾರೆ.

ಇದೇ ಭಾನುವಾರದಿಂದ ಉತ್ತರಪ್ರದೇಶದಲ್ಲಿ ವೀಕೆಂಡ್​ ಲಾಕ್​ಡೌನ್​ ಆರಂಭವಾಗಲಿದ್ದು, ರಾಜ್ಯದ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸಂಪೂರ್ಣ ಸ್ತಭ್ಧವಾಗಲಿದೆ. ಇನ್ನು ಲಾಕ್​ಡೌನ್​ ವೇಳೆ ಅತ್ಯವಶ್ಯಕ ಪದಾರ್ಥಗಳು ಜನರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.ಮಾಸ್ಕ್ ಧರಿಸಿದೇ ಇದ್ದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಸಿಎಂ ಯೋಗಿ, ಮಾಸ್ಕ್ ಧರಿಸದೇ ಇದ್ರೆ ಸ್ಥಳದಲ್ಲೇ 1 ಸಾವಿರ ದಂಡ ವಿಧಿಸುವಂತೆ ಸಿಎಂ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಎರಡನೇ ಬಾರಿ ಸಿಕ್ಕಿಬಿದ್ದರೆ 10 ಸಾವಿರ ದಂಡ ಎನ್ನುವ ಕಠಿಣ ಕ್ರಮವನ್ನು ಜಾರಿಗೊಳಿಸಿದ್ದಾರೆ. ಇನ್ನು ಭಾನುವಾರ ರಾಜ್ಯದಾದ್ಯಂತ ಸ್ಯಾನಿಟೈಸೇಷನ್ ಅಭಿಯಾನ ಆರಂಭವಾಗಲಿದೆ.