ನಿಕಿತಾ ತೋಮರ್ ಶೂಟೌಟ್ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ - BC Suddi
ನಿಕಿತಾ ತೋಮರ್ ಶೂಟೌಟ್ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನಿಕಿತಾ ತೋಮರ್ ಶೂಟೌಟ್ ಕೇಸ್: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಹರಿಯಾಣ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, ವಿದ್ಯಾರ್ಥಿನಿ ನಿಕಿತಾ ತೋಮರ್ ಶೂಟೌಟ್​ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ಫರೀದಾಬಾದ್ ಕೋರ್ಟ್​ ಆದೇಶ ಹೊರಡಿಸಿದೆ. ಮುಖ್ಯ ಆರೋಪಿ ತೌಸೀಫ್ ಮತ್ತು ಅವನ ಸ್ನೇಹಿತ ರಿಹಾನ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂರನೇ ಆರೋಪಿಯಾಗಿದ್ದ ಮೊಹಮದ್ ಅಜರುದ್ದೀನ್ ಎಂಬಾತ ಆರೋಪಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿದ್ದು, ಸಾಕ್ಷ್ಯ ಕೊರತೆಯಿಂದಾಗಿ ಮಾರ್ಚ್ 24ರಂದು ಖುಲಾಸೆಯಾಗಿದ್ದಾನೆ.

ಘಟನೆ ಹಿನ್ನಲೆ: 26 ಅಕ್ಟೋಬರ್​ 2020 ರಂದು ಹರಿಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಭ್​ಗಡದಲ್ಲಿ ವಿದ್ಯಾರ್ಥಿನಿ ನಿಕಿತಾ ತೋಮರ್​ ಮೇಲೆ ಆರೋಪಿಗಳು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಫರೀದಾಬಾದ್​ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎಸ್​ಐಟಿಗೆ ವರ್ಗಾಯಿಸಲಾಗಿತ್ತು. ಇಂದಿಗೆ ನಿಕಿತಾ ಕೊಲೆಯಾಗಿ ಬರೋಬ್ಬರಿ ಐದು ತಿಂಗಳು ಕಳೆದಿವೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ  ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.

error: Content is protected !!