4ರ ಬಾಲೆ ಮೇಲೆ ರೇಪ್: 55 ದಿನಗಳಲ್ಲೇ ಅಪರಾಧಿಗೆ ಜೀವಾವಧಿ ಶಿಕ್ಷೆ - BC Suddi
4ರ ಬಾಲೆ ಮೇಲೆ ರೇಪ್: 55 ದಿನಗಳಲ್ಲೇ ಅಪರಾಧಿಗೆ ಜೀವಾವಧಿ ಶಿಕ್ಷೆ

4ರ ಬಾಲೆ ಮೇಲೆ ರೇಪ್: 55 ದಿನಗಳಲ್ಲೇ ಅಪರಾಧಿಗೆ ಜೀವಾವಧಿ ಶಿಕ್ಷೆ

ಲಕ್ನೋ: ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ಅಪರಾಧಿಗೆ ಕೇವಲ 55 ದಿನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣ ಇತ್ಯರ್ಥಪಡಿಸಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.

ಅರುಣ್ ಕುಮಾರ್ ಶಿಕ್ಷೆಗೆ ಗುರಿಯಾದ ಅಪರಾಧಿ. ಪಾಪಿ ಅರುಣ್ 2021ರ ಜನವರಿಯಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಘಟನೆ ನಡೆದ 24 ಗಂಟೆಗಳಲ್ಲಿ ಅಂದ್ರೆ ಜನವರಿ 19ರಂದು ಪೊಲೀಸರು ಆತನನ್ನು ಬಂಧಿಸಿ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಕೊಂಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಶೀಘ್ರವಾಗಿ ನಡೆದ ತನಿಖೆಯೆ ಇದಕ್ಕೆ ಅಪರಾಧಿಗೆ ಬಹುಬೇಕ ಶಿಕ್ಷೆಯಾಗಿದೆ. ಅರುಣ್‌ ಬಂಧನವಾದ ಎರಡು ವಾರಗಳಲ್ಲಿ ಈ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ ಎಂದು ಇಟಾವಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!