ಕೋಲಾರ: ಸಿ.ಡಿ ಕೇಸ್ ವಿಚಾರಣೆ ಹಂತದಲ್ಲಿದೆ.ಆ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಆ ವಿಚಾರವಾಗಿ ನನಗೆ ಆಸಕ್ತಿ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಆಗಬೇಕಾದ್ದು ಆಗುತ್ತಿದೆ. ಅದರ ಬಗ್ಗೆ ವ್ಯಾಖ್ಯಾನ ಕೊಡೋದು ನನ್ನ ಯೋಗ್ಯತೆ ಗೌರವಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು. ಪಂಚೇದ್ರಿಯಗಳು ಕೆಲಸ ಮಾಡುತ್ತವೆ, ಇದೆಲ್ಲಾ ಕಾಮನ್ ರೀ, ದೊಡ್ಡ ವಿಚಾರವೇ ಅಲ್ಲ. ಸಂತ್ರಸ್ತೆ ಕೋರ್ಟ್ ಮುಂದೆ ಬಂದ ಮೇಲೆ ಎಲ್ಲಾ ಮುಗೀತು, ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ. ಜನರ ಕಷ್ಟ ಯಾರೂ ಮಾತಾಡಲ್ಲ. ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆ ಎಂದು ಹೇಳಿದರು.
ಇನ್ನು ಬೆಳಗಾವಿಯಲ್ಲಿ ಡಿಕೆಶಿ ಕಾರಿಗೆ ಚಪ್ಪಲಿ ಎಸೆತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಆ ಚಪ್ಪಲಿ ಹಳೆಯದಾಗಿರಬಹುದು. ಅದಕ್ಕೆ ಎಸೆದಿದ್ದಾರೆ. ಕಾರ್ಪೋರೇಷನ್ ನವರು ಬಂದು ಕ್ಲೀನ್ ಮಾಡ್ತಾರೆ ಬಿಡಿ ಎಂದು ವ್ಯಂಗ್ಯಯವಾಗಿ ಉತ್ತರಿಸಿದರು.