ಲಡಾಖ್ʼನ ಭಾರತ-ಚೀನಾ ಗಡಿಯಲ್ಲಿ ಭಾರತ ಒಂದಿಂಚೂ ಭೂಮಿಯನ್ನೂ ಕಳೆದುಕೊಂಡಿಲ್ಲ..! - BC Suddi
ಲಡಾಖ್ʼನ ಭಾರತ-ಚೀನಾ ಗಡಿಯಲ್ಲಿ ಭಾರತ ಒಂದಿಂಚೂ ಭೂಮಿಯನ್ನೂ ಕಳೆದುಕೊಂಡಿಲ್ಲ..!

ಲಡಾಖ್ʼನ ಭಾರತ-ಚೀನಾ ಗಡಿಯಲ್ಲಿ ಭಾರತ ಒಂದಿಂಚೂ ಭೂಮಿಯನ್ನೂ ಕಳೆದುಕೊಂಡಿಲ್ಲ..!

ನವದೆಹಲಿ: ‘ನಾವು ಯಾವುದೇ ಕ್ಷೇತ್ರದಲ್ಲಿ ಸೋತಿಲ್ಲ, ಈ ಇಡೀ ಘಟನೆ ಪ್ರಾರಂಭವಾಗುವ ಮೊದಲು ನಾವು ಎಲ್ಲಿದ್ದೇವೆಯೋ ಅಲ್ಲೇ ಇದ್ದೇವೆ. ಒಂದು ಇಂಚು ಭೂಮಿಯೂ ನಷ್ಟವಾಗಿಲ್ಲ’ ಎಂದು ಜನರಲ್ ನಾರವಾನೆ ಸುದ್ದಿ ಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಲಡಾಖ್ʼನ ಭಾರತ-ಚೀನಾ ಗಡಿಯಲ್ಲಿ ಭಾರತ ಒಂದಿಂಚೂ ಭೂಮಿಯನ್ನೂ ಕಳೆದುಕೊಂಡಿಲ್ಲ. ಕಳೆದು ಕೊಳ್ಳೋದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್‌ ಮುಕುಂದ್ ನರಾವನೆ ಹೇಳಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಚೀನಾ ಹಿಮಾಲಯದ ಎತ್ತರದ ಪಂಗೊಂಗ್ ಸರೋವರ ಪ್ರದೇಶದಿಂದ ಸೇನೆ ಮತ್ತು ಯುದ್ಧ ಟ್ಯಾಂಕ್ʼಗಳನ್ನು ಹಿಂದಕ್ಕೆ ಎಳೆಯಲು ಆರಂಭಿಸಿವೆ.

ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ದಂತಹ ಇತರ ಪ್ರದೇಶಗಳಲ್ಲಿ ಇದೇ ರೀತಿಯ ಇಳಿಕೆಯನ್ನ ನಿರೀಕ್ಷಿಸಲಾಗಿದೆ. ಕಳೆದ ಏಪ್ರಿಲ್ʼನಲ್ಲಿ ಚೀನಾ ಪಡೆಗಳು ಭಾರತದ ಗಡಿ ನಿಯಂತ್ರಣ ರೇಖೆ ಅಥವಾ ಲಡಾಖ್ ಪ್ರದೇಶದ ಡಿ ಫ್ಯಾಕ್ಟೋ ಗಡಿಯೊಳಗೆ ನುಸುಳಿದಾಗ ಈ ಕದನ ಆರಂಭವಾಯಿತು.

error: Content is protected !!