ರಾಜ್ಯದಲ್ಲಿ ಆಕ್ಸಿಜನ್ ಹಾಸಿಗೆಗಳ ಕೊರತೆ: 'ಆಕ್ಸಿಜನ್ ಬೆಡ್‌ಗಳನ್ನು ಈ ತಕ್ಷಣ ಹೆಚ್ಚಿಸಿ':ಟ್ವಿಟರ್‌ನಲ್ಲಿ ಆಂದೋಲನ ಆರಂಭ - BC Suddi
ರಾಜ್ಯದಲ್ಲಿ ಆಕ್ಸಿಜನ್ ಹಾಸಿಗೆಗಳ ಕೊರತೆ: ‘ಆಕ್ಸಿಜನ್ ಬೆಡ್‌ಗಳನ್ನು ಈ ತಕ್ಷಣ ಹೆಚ್ಚಿಸಿ’:ಟ್ವಿಟರ್‌ನಲ್ಲಿ ಆಂದೋಲನ ಆರಂಭ

ರಾಜ್ಯದಲ್ಲಿ ಆಕ್ಸಿಜನ್ ಹಾಸಿಗೆಗಳ ಕೊರತೆ: ‘ಆಕ್ಸಿಜನ್ ಬೆಡ್‌ಗಳನ್ನು ಈ ತಕ್ಷಣ ಹೆಚ್ಚಿಸಿ’:ಟ್ವಿಟರ್‌ನಲ್ಲಿ ಆಂದೋಲನ ಆರಂಭ

ಬೆಂಗಳೂರು: ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಅನೇಕ ಕೊರೊನಾ ರೋಗಿಗಳ ಮೃತಪಟ್ಟಿದ್ದಾರೆ. ರಾಜ್ಯದಲ್ಲಿಯೂ ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆಗಳ ಕೊರತೆಯಿಂದಾಗಿ ಜನ ಸಂಕಷ್ಟಕ್ಕೆ ತುತ್ತಾಗಿದ್ದು, ಈ ಮಧ್ಯೆ, ‘ಆಕ್ಸಿಜನ್ ಬೆಡ್‌ಗಳನ್ನು ಈ ತಕ್ಷಣ ಹೆಚ್ಚಿಸಿ’ ಎಂದು ಟ್ವಿಟರ್‌ನಲ್ಲಿ ಆಂದೋಲನ ನಡೆಸಲಾಗುತ್ತಿದೆ.

ಈ ಆಂದೋಲನವು ಶನಿವಾರ ಬೆಳಗ್ಗೆಯಿಂದ ಆರಂಭಿಸಲಾಗಿದೆ.ಇನ್ನು ಆಕ್ಸಿಜನ್ ಬೆಡ್ ಹೆಚ್ಚಿಸಿ, ಪ್ರತಿದಿನ ಎಷ್ಟು ಹೊಸ ಬೆಡ್ ವ್ಯವಸ್ಥೆ ಆಯಿತು ವರದಿ ಕೊಡಿ, ಬೆಂಗಳೂರಿನ ಸರ್ಕಾರೀ ಆರೋಗ್ಯ ವ್ಯವಸ್ಥೆ ಬಲಪಡಿಸಿ, ಯಾವ ಜಿಲ್ಲೆಯನ್ನೂ ಉಪೇಕ್ಷಿಸಬೇಡಿ, ಸರ್ಕಾರೀ ಸಿಬ್ಬಂದಿ ಹೆಚ್ಚಿಸಿ, ಗುತ್ತಿಗೆ ನೌಕರರ ಮರೆಯಬೇಡಿ, ಒಕ್ಕೂಟ ಸರ್ಕಾರದಿಂದ ಆಕ್ಸಿಜನ್ ಪಾಲಿನ ಹಕ್ಕು ಪಡೆದಿದ್ದರ ಲೆಕ್ಕ ಕೊಡಿ, ಜನರ ಹಕ್ಕೊತ್ತಾಯ ಪಟ್ಟಿ ಜಾರಿ ಮಾಡಿ, ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಟ್ಯಾಗ್ ಮಾಡುವುದನ್ನು ಮರೆಯಬೇಡಿ ಎಂದು ಈ ಆಂದೋಲನದಲ್ಲಿ ಉಲ್ಲೇಖಿಸಲಾಗಿದೆ.

ಬೆಳಗಾವಿ: ಕುಂದಾನಗರಿಯಲ್ಲಿ ವಿಭಿನ್ನ ಸಂದೇಶ ರವಾನಿಸುವ ಮೂಲಕ ಜನರ ಗಮನ ಸೆಳೆದ ಒಂಟೆ