ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಸ್ಥಾನಕ್ಕೆ ಏರಿಸಲು ನಾವುಗಳು ಪಟ್ಟ ಪಾಡು ದೇವ​ರಿಗೇ ಗೊತ್ತಿದೆ:ಮಾಜಿ ಸಚಿವ ​ಎನ್‌.ಚಲುವರಾಯಸ್ವಾಮಿ - BC Suddi
ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಸ್ಥಾನಕ್ಕೆ ಏರಿಸಲು ನಾವುಗಳು ಪಟ್ಟ ಪಾಡು ದೇವ​ರಿಗೇ ಗೊತ್ತಿದೆ:ಮಾಜಿ ಸಚಿವ ​ಎನ್‌.ಚಲುವರಾಯಸ್ವಾಮಿ

ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಸ್ಥಾನಕ್ಕೆ ಏರಿಸಲು ನಾವುಗಳು ಪಟ್ಟ ಪಾಡು ದೇವ​ರಿಗೇ ಗೊತ್ತಿದೆ:ಮಾಜಿ ಸಚಿವ ​ಎನ್‌.ಚಲುವರಾಯಸ್ವಾಮಿ

ಕುದೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಮ್ಮನ್ಯಾಕೆ ಇಷ್ಟು ದ್ವೇಷಿಸುತ್ತಾರೆ ? ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಮಾಧ್ಯಮಗಳು ಎದುರು ಪ್ರಶ್ನೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಮುಖ್ಯ​ಮಂತ್ರಿ ಸ್ಥಾನಕ್ಕೆ ಏರಿಸಲು ನಾವುಗಳು ಪಟ್ಟ ಪಾಡು ದೇವ​ರಿಗೇ ಗೊತ್ತಿದೆ. ಆದರೂ ಕೂಡಾ ಕುಮಾರಸ್ವಾಮಿ ನಮ್ಮನ್ನೇಕೆ ದ್ವೇಷಿಸುತ್ತಾರೆ ? ಎಂಬುದು ಇಂದಿಗೂ ತಿಳಿದಿಲ್ಲ ಎಂದು ಮಾಜಿ ಸಚಿವ ​ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.

ಕುದೂರಿನ ಶ್ರೀ ರಾಮಲೀಲಾ ಮೈದಾನದಲ್ಲಿ ಮಾಗಡಿ ಯೂತ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎಚ್‌.ಸಿ.ಬಿ ಕಪ್‌ ಕ್ರಿಕೆಚ್‌ ಟೂರ್ನಾಮೆಂಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾವುಗಳು ಕುಮಾ​ರ​ಸ್ವಾಮಿ ಅವರ ಕುರಿತು ಪ್ರೀತಿ ಗೌರವದಿಂದ ಕೆಲಸ ಮಾಡಿದ್ದೇವೆ.

ಆದರೂ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ, ಬಾಲಕೃಷ್ಣ ಮೋಸ ಮಾಡಿದರು ಎಂದು ಹೇಳುತ್ತಾರೆ. ನಾನಂತೂ ಅವರ ಕುರಿತು ಕೇವಲವಾಗಿ ಮಾತನಾಡುವುದಿಲ್ಲ. ಆದರೂ ಅವರಾಕೆ ನಮ್ಮನ್ನು ದ್ವೇಷಿಸುತ್ತಾರೆ ಎಂಬುದು ಗೊತ್ತಿಲ್ಲ ಎಂದರು.

ಮಾಜಿ ಶಾಸಕ ಬಾಲಕೃಷ್ಣರವರ ರಾಜಕಾರಣ ಆರಂಭವಾಗಿದ್ದು ದೇವೇಗೌಡರಿಂದ ಅಲ್ಲ. ಅಂದು ಜನತಾದಳಕ್ಕೆ ತಾಲೂಕಿನಲ್ಲಿ ಕೇವಲ 4 ಸಾವಿರ ಮತಗಳು ಇದ್ದಂತಹ ಸಮಯದಲ್ಲಿ ಬಾಲಕೃಷ್ಣರವರು ಬರೋಬ್ಬರಿ 60 ಸಾವಿರ ಮತಗಳನ್ನು ದೇವೇಗೌಡರಿಗೆ ಹಾಕಿಸಿದ್ದರು ಎಂದರು.

ಬೆಲೆ ಏರಿಕೆಯ ನಡುವೆ ಮತ್ತೊಂದು ಬಿಗ್‌ ಶಾಕ್‌: ಏ.1 ರಿಂದ ವಿಮಾನಯಾನದ ಟಿಕೆಟ್‌ಗಳು ದುಬಾರಿ

error: Content is protected !!