ಕೊರೊನಾ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ - BC Suddi
ಕೊರೊನಾ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ

ಕೊರೊನಾ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ

ಬೆಂಗಳೂರು: ದೇಶದಲ್ಲಿ ರಕ್ಕಸ ಕೊರೊನಾ ಕಂಡವರನ್ನೇಲ್ಲಾ ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದೆ. ಜನ ಉಸಿರು ಬಿಗಿಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಕರಾಳತೆಯನ್ನು ಬಿಚ್ಚಿಟ್ಟಿರುವ ನಟಿ ಕೃತಿ ಕರಬಂದ, ‘ಕಳೆದ 48 ಗಂಟೆಗಳು ನನಗೂ ನನ್ನ ಕುಟುಂಬಕ್ಕೂ ತೀರಾ ಸಂಕಟದ ಸಮಯವಾಗಿತ್ತು. ಅದು ಮನೆಗೆ ಬರುವವರೆಗೂ ಎಷ್ಟು ಭಯಾನಕ ಎನ್ನುವುದು ಗೊತ್ತಾಗಲ್ಲ. ದಯವಿಟ್ಟು ಮನೆಯಲ್ಲೇ ಇರಿ. ಮನೆಯಿಂದ ಹೊರಹೋಗಲು ನಿರ್ಧರಿಸಿದರೆ ಒಂದು ಹೆಜ್ಜೆ ಹಿಂದಕ್ಕೆ ಇಡಿ. ನಿಮ್ಮ ಪ್ರಾಣವನ್ನು ಪಣಕ್ಕಿಡುವುದು ಸರಿಯೇ ಎಂದು ಯೋಚಿಸಿ’ ಎಂದು ಹೇಳಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿ ಅನುಭವಿಸಿದ ಕಷ್ಟವನ್ನು ವಿವರಿಸುವ ಮೂಲಕ ಎಲ್ಲರೂ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. ಕೃತಿ ಕರಬಂದ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನು ಈಗಾಗಲೇ ಸಾಕಷ್ಟು ತಾರೆಯರು ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.