ಬೆಂಗಳೂರು: ಬೆಂಗಳೂರಿನ KR ಮಾರ್ಕೆಟ್‌ನಲ್ಲಿ ಫೈ ಓವರ್‌ನಿಂದ ಹಣದ ಕಂತೆ ಎಸೆದಿದ್ದ ವ್ಯಕ್ತಿ ಅರುಣ್ ಎಂಬುದು ಗೊತ್ತಾಗಿದೆ.
ಈತ ಒಬ್ಬ ಉದ್ಯಮಿ, ನಿರೂಪಕ ಹಾಗೂ ಇವೆಂಟ್ ಮ್ಯಾನೇಜರ್. ಅರುಣ್ ವಿ ಡಾಟ್ ಇವೆಂಟ್ಸ್ ಎಂಬ ಕಂಪೆನಿ ನಡೆಸುತ್ತಿದ್ದು, ಬೆಂಗಳೂರಿನ ದೊಡ್ಡ ಕಾರ್ಯಕ್ರಮಗಳಲ್ಲಿ ಆಂಕರ್ ಆಗಿ ಗಮನಸೆಳೆಯುತ್ತಿದ್ದ. ಬಿಸಿನೆಸ್ ಕೋಚ್ ಕೂಡ ಆಗಿರುವ ಅರುಣ್ ಯಾವ ಕಾರಣಕ್ಕೆ ಈ ರೀತಿ ಸಾರ್ವಜನಿಕ ಸ್ಥಳಕ್ಕೆ ಬಂದು ನೋಟು ಎಸೆದು ಹೋಗಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ