ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೋವಿಡ್‌ ದೃಡ - BC Suddi
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೋವಿಡ್‌ ದೃಡ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೋವಿಡ್‌ ದೃಡ

ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರು ಐಸೋಲೇಷನ್‌ಗೆ ಒಳಗಾಗಿದ್ದಾರೆ. ಮಂಗಳವಾರವಷ್ಟೆ ಅವರ ಕಚೇರಿಯ ಹಲವರು ಕೊರೊನಾ ಸೋಂಕಿತರಾಗಿದ್ದರು. ಇದಾದ ಬಳಿಕ ಕ್ವಾರಂಟೈನ್‌ಗೆ ಒಳಗಾಗಿದ್ದ ಅವರು ಇದೀಗ ಪರೀಕ್ಷೆ ಮಾಡಿಸಿದಾಗ ಸೋಂಕಿತರಾಗಿರುವುದು ದೃಢಪಟ್ಟಿದೆ. ತಾವು ಸೋಂಕಿತರಾಗಿದ್ದರೂ ರಾಜ್ಯ ಸರಕಾರದ ಚಟುವಟಿಕೆಗಳು ಎಂದಿನಂತೆ ಮುಂದುವರಿಯುತ್ತವೆ ಎಂದು ಅವರು ಹೇಳಿದ್ದಾರೆ. “ಆರಂಭಿಕ ರೋಗಲಕ್ಷಣಗಳು ಕಂಡುಬಂದಾಗ, ನಾನು ಕೋವಿಡ್‌ ಪರೀಕ್ಷೆಗೆ ಒಳಪಟ್ಟೆ ಮತ್ತು ನನ್ನ ವರದಿಯು ಪಾಸಿಟಿವ್‌ ಬಂದಿದೆ. ನಾನು ಸ್ವಯಂ ಐಸೋಲೇಷನ್‌ನಲ್ಲಿ ಇದ್ದು, ವೈದ್ಯರ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ. ಎಲ್ಲಾ ಕೆಲಸಗಳನ್ನು ವರ್ಚುವಲ್‌ ವೇದಿಕೆಗಳ ಮೂಲಕ ನಿರ್ವಹಿಸುತ್ತಿದ್ದೇನೆ,” ಎಂದು ಯೋಗಿ ಆದಿತ್ಯನಾಥ್‌ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.