ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ : ಕೊನೆಯ ಎಸೆತದಲ್ಲಿ ಗೆದ್ದು ದಾಖಲೆ ಬರೆದ ಮುಂಬೈ ಇಂಡಿಯನ್ಸ್ - BC Suddi
ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ :  ಕೊನೆಯ ಎಸೆತದಲ್ಲಿ ಗೆದ್ದು ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ : ಕೊನೆಯ ಎಸೆತದಲ್ಲಿ ಗೆದ್ದು ದಾಖಲೆ ಬರೆದ ಮುಂಬೈ ಇಂಡಿಯನ್ಸ್

ದೆಹಲಿ: ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್‌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಲು ಜೊತೆಗೆ ಐಪಿಎಲ್‌ನಲ್ಲಿ ದಾಖಲೆ ಬರೆದಿದೆ.

ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ (ಶನಿವಾರ) ನಡೆದ ಐಪಿಎಲ್ ಟೂರ್ನಿಯ 27ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ವಿಕೆಟ್ ಕಳೆದು 218 ರನ್ ಗಳಿಸಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡವು 6 ವಿಕೆಟ್ ನಷ್ಟಕ್ಕೆ 219 ರನ್ ಚಚ್ಚಿ ಗೆದ್ದು ಬೀಗಿದೆ.

ಇದೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ವೆಸ್ಟ್‌ ಇಂಡೀಸ್‌ನ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಪೊಲಾರ್ಡ್ 50 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದರಿಂದ ಮುಂಬೈ ತಂಡ ಅತ್ಯಧಿಕ ರನ್ ಚೇಸ್ ಮಾಡಿದ ದಾಖಲೆ ಪಟ್ಟಿಗೆ ಸೇರಲು ಸಾಧ್ಯವಾಗಿದೆ.

ಐಪಿಎಲ್‌ನಲ್ಲಿ 200+ ರನ್ ಚೇಸ್ ದಾಖಲೆಗಳು
* 224 ರನ್, ರಾಜಸ್ಥಾನ್ ರಾಯಲ್ಸ್, vs ಪಂಜಾಬ್ ಕಿಂಗ್ಸ್, ಶಾರ್ಜಾ, 2020
* 219 ರನ್, ಮುಂಬೈ ಇಂಡಿಯನ್ಸ್, vs ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ, 2021*
* 215 ರನ್, ರಾಜಸ್ಥಾನ್ ರಾಯಲ್ಸ್, vs ಡೆಕ್ಕನ್ ಚಾರ್ಜರ್ಸ್, ಹೈದರಾಬಾದ್, 2008