ಕೇರಳ: ಯೂಟ್ಯೂಬ್ ವಿಡಿಯೋ ಪರಿಣಾಮ: ಯುವಕ ಸಾವು - BC Suddi
ಕೇರಳ: ಯೂಟ್ಯೂಬ್ ವಿಡಿಯೋ ಪರಿಣಾಮ: ಯುವಕ ಸಾವು

ಕೇರಳ: ಯೂಟ್ಯೂಬ್ ವಿಡಿಯೋ ಪರಿಣಾಮ: ಯುವಕ ಸಾವು

ಕೇರಳ: ಯೂಟ್ಯೂಬ್ ವಿಡಿಯೋ ಒಂದನ್ನು ನೋಡಿಕೊಂಡು ಬಾಲಕ ತಲೆ ಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಕಡ್ಡಿ ಬಳಸಿ ನೇರಗೊಳಿಸಲು ಮುಂದಾಗಿದ್ದಾನೆ ಆಗ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕ ಮೃತಪಟ್ಟಿದ್ದಾನೆ. ಇದರ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮೃತ ಬಾಲಕನನ್ನು ಶಿವನಾರಾಯಣನ್ ಎಂದು ಗುರುತಿಸಲಾಗಿದ್ದು, 7ನೇ ತರಗತಿ ಓದುತ್ತಿದ್ದ ಎಂಬುದು ತಿಳಿದುಬಂದಿದೆ. ಸುಟ್ಟು ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಕೂದಲಿಗೆ ಸೀಮೆಎಣ್ಣೆ ಹೆಚ್ಚಿಕೊಂಡು ಬೆಂಕಿಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಯತ್ನಿಸಿದ ಬಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ.

ಬಾಲಕ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಸ್ನಾನಗೃಹದೊಳಗೆ ಈ ಕೆಲಸ ಮಾಡಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಡಿಯೋಗಳನ್ನು ನೋಡಿ ಬಾಲಕ ಅದೇ ರೀತಿ ಮಾಡಲು ಮುಂದಾಗಿದ್ದು, ಈಗ ಉಸಿರನ್ನೇ ನಿಲ್ಲಿಸಿದ್ದಾನೆ.

 

error: Content is protected !!