“ಕಾಸರ್‌ಗೋಡ್ ನೆಟ್‌ವರ್ಕ್” ಎಂಬ ಹೆಸರಿನಡಿ ಕಾರ್ಯನಿರ್ವಹಿಸುವ ಜಾಲವನ್ನು ಪತ್ತೆ ಮಾಡಿದ ಎನ್‌ಸಿಬಿ ..! - BC Suddi
“ಕಾಸರ್‌ಗೋಡ್ ನೆಟ್‌ವರ್ಕ್” ಎಂಬ ಹೆಸರಿನಡಿ ಕಾರ್ಯನಿರ್ವಹಿಸುವ ಜಾಲವನ್ನು ಪತ್ತೆ ಮಾಡಿದ ಎನ್‌ಸಿಬಿ ..!

“ಕಾಸರ್‌ಗೋಡ್ ನೆಟ್‌ವರ್ಕ್” ಎಂಬ ಹೆಸರಿನಡಿ ಕಾರ್ಯನಿರ್ವಹಿಸುವ ಜಾಲವನ್ನು ಪತ್ತೆ ಮಾಡಿದ ಎನ್‌ಸಿಬಿ ..!

ನವದೆಹಲಿ: ಭಾರತದಿಂದ ಮಧ್ಯಪ್ರಾಚ್ಯ ದೇಶಗಳಿಗೆ ಅನುಮಾನ ಬಾರದಂತೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು “ಕಾಸರ್‌ಗೋಡ್ ನೆಟ್‌ವರ್ಕ್” ಎಂಬ ಹೆಸರಿನಡಿ ಕಾರ್ಯನಿರ್ವಹಿಸುವ ಜಾಲವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪತ್ತೆ ಮಾಡಿದೆ.

ಕತಾರ್‌ನ ವಿಮಾನ ನಿಲ್ದಾಣಗಳಲ್ಲಿನ ಅಧಿಕಾರಿಗಳು ಪ್ರತಿ ತಿಂಗಳು 10-15 ಭಾರತೀಯರನ್ನು ಮಾದಕ ದ್ರವ್ಯಗಳ ಸಮೇತ ಬಂಧಿಸುತ್ತಾರೆ. ಇವರಲ್ಲಿ ಬಹುತೇಕರು ಕಾಸರಗೋಡು ನೆಟ್‌ವರ್ಕ್‌ ಜಾಲಕ್ಕೆ ಸೇರಿದವರಾಗಿದ್ದು, ಕತಾರ್, ಸೌದಿ ಅರೇಬಿಯಾ, ಕೇರಳ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ . ಇವರು ಒಬ್ಬರಿಗೊಬ್ಬರು ವಾಯ್ಸ ಇಂಟರ್‌ನೆಟ್‌ ಪ್ರೊಟೊಕಾಲ್‌ (ವಿಒಐಪಿ) ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ

ದೇಶದಲ್ಲಿ ಈ ನೆಟ್‌ವರ್ಕ್‌ಗಾಗಿ ಸುಮಾರು 100 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಗ್ಯಾಂಗ್ ನ ಸದಸ್ಯರು ವಯನಾಡ್ (ಕೇರಳ), ಮಡಿಕೇರಿ, ಮಂಗಳೂರು ಮತ್ತು ಕೊಡಗು (ಕರ್ನಾಟಕ), ಹೈದರಾಬಾದ್, ಬೆಂಗಳೂರು, ಮುಂಬೈ, ಗೋವಾ ಮತ್ತು ದೆಹಲಿಯಲ್ಲಿ ಪ್ರಸ್ತುತ ನೆಲೆಯೂರಿದ್ದಾರೆ.

ಮಡಿಕೇರಿ, ಮಂಗಳೂರು, ಕೊಡಗು, ಬೆಂಗಳೂರು, ಕೇರಳದ ವಯನಾಡ್‌, ಹೈದರಾಬಾದ್‌, ಮುಂಬಯಿ, ಗೋವಾ ಮತ್ತು ದಿಲ್ಲಿಯಲ್ಲಿ ಇವರಿದ್ದು, ಅವರೆಲ್ಲರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ದೇಶದ 6-7 ವಿಮಾನ ನಿಲ್ದಾಣಗಳ ಮೂಲಕ ಈ ತಂಡ ಕಳ್ಳಸಾಗಣೆ ನಡೆಸುತ್ತಿದೆ ಎಂದು ಎನ್‌ಸಿಬಿಯ ಮತ್ತೂಬ್ಬ ಅಧಿಕಾರಿ ತಿಳಿಸಿದ್ದಾರೆ.

2019ರಲ್ಲಿ ಮೊಹಮ್ಮದ್‌ ಶಫೀಕ್‌ ಮತ್ತು ಆತನ ಗರ್ಭಿಣಿ ಪತ್ನಿ ಒನಿಬಾ ಕೌಸರ್‌ ಶಕೀಲ್‌ ಅಹ್ಮದ್‌ ಎಂಬ ದಂಪತಿಯನ್ನು ಹನಿಮೂನ್‌ ಗಿಫ್ಟ್ ಪ್ಯಾಕೇಜ್‌ನಡಿ ತಬಸ್ಸಮ್‌ ಮತ್ತು ಆಕೆಯ ಸ್ನೇಹಿತ ನಿಜಾಮ್‌ ಕಾರಾ ಎಂಬವರು ಕತಾರ್‌ ಪ್ರವಾಸಕ್ಕೆ ಕಳುಹಿಸಿದ್ದರು. ಪ್ಯಾಕೇಜ್‌ ಅಡಿಯಲ್ಲಿ ದಂಪತಿಗೆ ನೀಡಲಾಗಿದ್ದ ಗಿಫ್ಟ್ನಲ್ಲಿ ಮಾದಕದ್ರವ್ಯಗಳನ್ನು ಅಡಗಿಸಿಡಲಾಗಿತ್ತು. ಹಾಗಾಗಿ ದೋಹಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಅವರಿಗೆ ಜೈಲು ಶಿಕ್ಷ ಆಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿತೆಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕತಾರ್ ಜೈಲಿನಲ್ಲಿರುವ ಮೊಹ್ಸಿನ್ ಕೆ.ಪಿ ಇದೆಲ್ಲದರ ಮಾಸ್ಟರ್ ಮೈಂಡ್ ಆಗಿದ್ದು, ಜಮ್ಮು ಕಾಶ್ಮೀರ ನೇಪಾಳ ಮತ್ತು ಹಿಮಾಚಲ ಪ್ರದೇಶದಿಂದ ಕಳ್ಳಸಾಗಣೆ ಮಾಡಿದ ಕೊಕೇನ್ ಮತ್ತು ವಿಭಿನ್ನ ಸೈಕೋಟ್ರೋಪಿಕ್ ಪದಾರ್ಥಗಳನ್ನ ದೇಶ ವಿದೇಶದಳಿಗೆ ಸಾಗಿಸಲಿ ಭಾರತೀಯ ಮಾದಕವಸ್ತು ಕಳ್ಳಸಾಗಣೆದಾರರು ದಕ್ಷಿಣ ಮತ್ತು ಪಶ್ಚಿಮ ಭಾರತದ ವಿವಿಧ ವಿಮಾನ ನಿಲ್ದಾಣಗಳನ್ನು ” ಕಾಸರ್‌ಗೋಡ್ ನೆಟ್ ವರ್ಕ್” ನ ಜಾಲದ ಸದಸ್ಯರು ಬಳಸುತ್ತಾರೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್ – ಸರ್ಕಾರದಿಂದ ಸುಗ್ರೀವಾಜ್ಞೆಗೆ ಸಿದ್ಧತೆ

error: Content is protected !!