ದೇಶದಲ್ಲಿ 3.57ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲು : ಪಟ್ಟಿಯಲ್ಲಿ ಮೊದಲ‌ ಸ್ಥಾನದತ್ತ ಕರ್ನಾಟಕ - BC Suddi
ದೇಶದಲ್ಲಿ 3.57ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲು : ಪಟ್ಟಿಯಲ್ಲಿ ಮೊದಲ‌ ಸ್ಥಾನದತ್ತ ಕರ್ನಾಟಕ

ದೇಶದಲ್ಲಿ 3.57ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲು : ಪಟ್ಟಿಯಲ್ಲಿ ಮೊದಲ‌ ಸ್ಥಾನದತ್ತ ಕರ್ನಾಟಕ

ಬೆಂಗಳೂರು: ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗುತ್ತಿವೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಪ್ರಕರಣಗಳು ಇಳಿಮುಖವಾಗಿ 70 ಸಾವಿರದಿಂದ 50 ಸಾವಿರ ಆಸುಪಾಸಿಗೆ ಬಂದಿವೆ. ಆದರೆ ಕರ್ನಾಟಕವು ಏರಿಕೆ ಹಾದಿ ಮುಂದುವರೆಸಿದೆ.

ಸೋಮವಾರ 44,438 ಸೋಂಕು ಪ್ರಕರಣಗಳು, 239 ಸೋಂಕಿತರ ಸಾವಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿಯೇ 22,112 ಮಂದಿಗೆ ಸೋಂಕು ತಗುಲಿದ್ದು, 115 ಸಾವಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಆರು ಸಾವಿರದಷ್ಟು ಕುಸಿದಿವೆ. ಆದರೆ, 6705 ಪ್ರಕರಣಗಳು, 22 ಸಾವು ಹೆಚ್ಚಳವಾಗಿವೆ.

ಇನ್ನು ಸೋಮವಾರ 1,49,090 ಮಂದಿ ಸೋಂಕು ಪರೀಕ್ಷೆಗೊಳಗಾಗಿದ್ದು, ಪಾಸಿಟಿವಿಟಿ ದರ ಶೇ.30 ದಾಖಲಾಗಿದ್ದು, ಪರೀಕ್ಷೆಗೊಳಗಾಗದ 100 ಮಂದಿಯಲ್ಲಿ 30 ಮಂದಿಗೆ ಸೋಂಕು ದೃಢಪಟ್ಟಿದೆ. ಅಂದರೆ ಮೂವರಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.57ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 2 ಕೋಟಿಗೆ ಏರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

3,57,229 ಹೊಸ ಸೋಂಕುಗಳು ಕಾಣಿಸಿಕೊಂಡಿದ್ದು , 3,20,289 ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಮತ್ತು 3,449 ಸಾವುಗಳು ಸಂಭವಿಸಿವೆ.

ರಾಜ್ಯದಲ್ಲಿ ಅಂಕೆ ಮೀರಿದ ಕೊರೊನಾ ಸೋಂಕು : ಸಿಎಂ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ