ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ: ಜೆಸ್ಟ್ ಸರಕಾರಿ ನೌಕರರಿಗೆ ರಿಲೀಫ್.! - BC Suddi
ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ: ಜೆಸ್ಟ್ ಸರಕಾರಿ ನೌಕರರಿಗೆ ರಿಲೀಫ್.!

ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶ: ಜೆಸ್ಟ್ ಸರಕಾರಿ ನೌಕರರಿಗೆ ರಿಲೀಫ್.!

 

ಬೆಂಗಳೂರು : ಕರ್ನಾಟಕ ಮಾಹಿತಿ ಆಯೋಗ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಸರ್ಕಾರಿ ನೌಕರರು ಸಿಬ್ಬಂದಿಗಳ ವೈಯಕ್ತಿಕ ದ್ವೇಷಕ್ಕೆ ಖಾಸಗಿ ಮಾಹಿತಿ ಕೇಳುವಂತಿಲ್ಲ ಎಂದು ಆದೇಶ ನೀಡಿದೆ.

ಖಾಸಗಿ ಮಾಹಿತಿ ಕೋರಿಕೆ ಸಂಬಂಧ ಆದೇಶ ಹೊರಡಿಸಿರುವ ಮಾಹಿತಿ ಆಯೋಗ, ಸರ್ಕಾರಿ ನೌಕರರು ಸಿಬ್ಬಂದಿಗಳ ಸ್ವವಿವರ ಹಾಗೂ ಸೇವಾ ಪುಸ್ತಕ ಖಾಸಗಿ ಮಾಹಿತಿಯಾಗಿದ್ದು,ವೈಯಕ್ತಿಕ ದ್ವೇಷಕ್ಕೆ ಖಾಸಗಿ ಮಾಹಿತಿಯನ್ನು ನೀಡಲು ಆಗುವುದಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗ ತಿಳಿಸಿದೆ.

ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರ ಮಾಹಿತಿ ಕೋರಿ ಕೆ.ಎಸ್. ರವಿಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಮಹಿತಿ ಆಯೋಗ ತಿರಸ್ಕರಿಸಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಖಾಸಗಿ ಮಾಹಿತಿ ಕೇಳುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.

error: Content is protected !!