ಬೆಂಗಳೂರು : ಕನ್ನಡ ಸಾಹಿತ್ಯ ಲೋಕದಲ್ಲಿ, ‘ಎನ್ನೆಸ್ಸೆಲ್,’ ಎಂದೇ ಮನೆಮಾತಾಗಿರುವ ‘ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ’ರು ಇಂದು ವಿಧಿವಶರಾಗಿದ್ದಾರೆ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು 1936ರ ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದರು.

ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ನಿನ್ನೆಗೆ ನನ್ನ ಮಾತು, ಸುಳಿ, ದೀಪಿಕಾ, ಬಾರೋ ವಸಂತ, ಚಿತ್ರಕೂಟ, ಹೊಳೆ ಸಾಲಿನ ಮರ, ಅರುಣಗೀತೆ, ಊರ್ವಶಿ ಗೀತ ನಾಟಕ ಸೇರಿದಂತೆ ಹಲವು ಕವನ ಸಂಕಲನಗಳನ್ನು ಲಕ್ಷ್ಮಿ ನಾರಾಯಣ ಭಟ್ಟರು ಬರೆದಿದ್ದರು.