ಸಂಸದರ ಮನೆ ಮುಂದೆ ಮಹಿಳೆ ಆತ್ಮಹತ್ಯೆ ಯತ್ನ : ಸ್ಪಷ್ಟನೆ ಕೊಟ್ಟ ಜೋಶಿ - BC Suddi
ಸಂಸದರ ಮನೆ ಮುಂದೆ ಮಹಿಳೆ ಆತ್ಮಹತ್ಯೆ ಯತ್ನ : ಸ್ಪಷ್ಟನೆ ಕೊಟ್ಟ ಜೋಶಿ

ಸಂಸದರ ಮನೆ ಮುಂದೆ ಮಹಿಳೆ ಆತ್ಮಹತ್ಯೆ ಯತ್ನ : ಸ್ಪಷ್ಟನೆ ಕೊಟ್ಟ ಜೋಶಿ

ಬೆಳಗಾವಿ: ಮಹಿಳೆಯೋರ್ವಳು ಸಂಸದರ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಮಾಲತಾಡಿದ ಸಂಸದ ಜೋಶಿ ಈ ಎಲ್ಲ ಘಟನೆಗಳನ್ನು ನಾನು ಟಿವಿಯಲ್ಲಿ ನೋಡಿದ ತಕ್ಷಣ ಪರಿಶೀಲನೆ ಮಾಡಿದ್ದೇನೆ. 2019ರಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಗರಗ ಗ್ರಾಮದಲ್ಲಿ ಅವರ ಮನೆ ಬಿದ್ದಿತ್ತು. ಅವರಿಗೆ 50 ಸಾವಿರ ರೂ. ಪರಿಹಾರ ಕೊಟ್ಟಿದ್ದಾರೆ ಎಂದು ತಿಳಿಸಿದರು.

2020ರಲ್ಲಿ ಬಿದ್ದ ಮನೆಗಳಿಗೆ ಸಿಎಂ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದರು. ಅಧಿಕಾರಿಗಳು ವರದಿ ಕೊಟ್ಟಂತೆ 2019ರಲ್ಲಿ ಬಿದ್ದ ಮನೆಗೆ 5 ಲಕ್ಷ ರೂ. ಪರಿಹಾರ ಅವರು ಕೇಳಿದ್ದರು. ಅವರ ಅರ್ಜಿಯನ್ನು ಡಿಸಿ, ತಹಶಿಲ್ದಾರ್ ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಹೇಳಿದ್ದೆ. ಡಿಸಿಯವರು ಪರಿಶೀಲನೆ ಮಾಡಿ ಬರೋದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

2019ರಲ್ಲಿ ಬಿದ್ದ ಮನೆಗೆ ನಿಯಮಾವಳಿ ಪ್ರಕಾರ ಪರಿಹಾರ ಕೊಡಲಾಗಿದೆ. ಮತ್ತೊಮ್ಮೆ ಎರಡನೇ ಸಾರಿ ಪರಿಹಾರ ಕೇಳಲು ಬಂದಿದ್ದರು. ಎರಡು ತಿಂಗಳ ಹಿಂದೆ ನನಗೆ ಕೊಟ್ಟ ಮನವಿಯನ್ನು ಡಿಸಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೆ. ದುರ್ದೈವ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಡಿಸಿಗೆ ತಿಳಿಸಿದ್ದೇನೆ ಎಂದರು.

ಎಂಎಲ್ ಎ ಅಮೃತ ದೇಸಾಯಿಯವರು ಇವರಿಗೆ 50 ಸಾವಿರ ರೂ. ಪರಿಹಾರ ಕೊಡಿಸಿದ್ದಾರೆ. ಈಗ ಅದೇ ಮನೆಗೆ ಎರಡನೇ ಬಾರಿ ಪರಿಹಾರ ಕೇಳಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸುವೆ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.

error: Content is protected !!