ಭಾರತ ಮೂಲದ ಮಹಿಳೆಯನ್ನು ಉನ್ನತ ನ್ಯಾಯಾಂಗ ಹುದ್ದೆಗೆ ಆಯ್ಕೆ ಮಾಡಿದ ಜೋ ಬಿಡೆನ್‌ - BC Suddi
ಭಾರತ ಮೂಲದ ಮಹಿಳೆಯನ್ನು ಉನ್ನತ ನ್ಯಾಯಾಂಗ ಹುದ್ದೆಗೆ ಆಯ್ಕೆ ಮಾಡಿದ ಜೋ ಬಿಡೆನ್‌

ಭಾರತ ಮೂಲದ ಮಹಿಳೆಯನ್ನು ಉನ್ನತ ನ್ಯಾಯಾಂಗ ಹುದ್ದೆಗೆ ಆಯ್ಕೆ ಮಾಡಿದ ಜೋ ಬಿಡೆನ್‌

ವಾಷಿಂಗ್ಟನ್:   ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್‌ ಅವರು ಭಾರತ ಮೂಲದ ರೂಪಾ ರಂಗ ಪುಟ್ಟಗುಂಟ ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕ ಮಾಡಲು ಆಯ್ಕೆ ಮಾಡಿದ್ದಾರೆ. ಉನ್ನತ ನ್ಯಾಯಾಂಗ ಹುದ್ದೆಗಳಿಗೆ ಒಟ್ಟು 10 ಮಂದಿಯನ್ನು ಜೋ ಬಿಡೆನ್‌ ಅವರು ಆಯ್ಕೆ ಮಾಡಿದ್ದು, ಈ ಪೈಕಿ ಆಫ್ರಿಕಾ ಮೂಲದ ಅಮೇರಿಕನ್‌ ಪ್ರಜೆ ಹಾಗೂ ಮುಸ್ಲಿಂ ಅಮೇರಿಕನ್‌ ಕೂಡಾ ಇದ್ದಾರೆ.

ಫೆಡರಲ್ ಸರ್ಕ್ಯೂಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶ ಹುದ್ದೆಗಳಿಗೆ 10 ಮಂದಿಯನ್ನು ಹಾಗೂ ಕೊಲಂಬಿಯಾ ಜಿಲ್ಲೆಯ ಉನ್ನತ ಕೋರ್ಟ್‌ಗೆ ಒಬ್ಬರನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದಾರೆ. ಇನ್ನು ಸೆನೆಟ್‌ ಸಮ್ಮತಿಸಿದರೆ ನ್ಯಾಯಮೂರ್ತಿ ಪುಟ್ಟಗುಂಟ ಅವರು ಅಮೇರಿಕಾದ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಮೊಟ್ಟಮೊದಲ ಏಷ್ಯನ್ ಅಮೇರಿಕನ್‌ ಆಂಡ್‌ ಫೆಸಿಫಿಕ್ ಐಲೆಂಡ್ (ಎಎಪಿಐ)ನ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ಪುಟ್ಟಗುಂಟ ಅವರು ಪ್ರಸ್ತುತ ಡಿ.ಸಿ. ರೆಂಟರ್ ಹೌಸಿಂಗ್ ಕಮಿಷನ್‌ನ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದು ಉನ್ನತ ನ್ಯಾಯಾಂಗ ಹುದ್ದೆಗೆ ಆಯ್ಕೆಯಾದರೆ ವಾಷಿಂಗ್ಟನ್‌ ಡಿಜಿ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಲಿದ್ದಾರೆ.

ರಾಜ್ಯದಲ್ಲಿ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧತೆ

error: Content is protected !!