ಜಿಮ್, ಸ್ವಿಮ್ಮಿಂಗ್ ಫೂಲ್ ಬಂದ್- ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್ - BC Suddi
ಜಿಮ್, ಸ್ವಿಮ್ಮಿಂಗ್ ಫೂಲ್ ಬಂದ್- ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್

ಜಿಮ್, ಸ್ವಿಮ್ಮಿಂಗ್ ಫೂಲ್ ಬಂದ್- ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಶುರುವಾಗಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಿಲಿಕಾನ್ ಸಿಟಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೊರೊನಾ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಪಾರ್ಕ್ ಗಳಲ್ಲಿ ಓಪನ್ ಜಿಮ್‌ಗಳನ್ನು ಬಂದ್ ಮಾಡಲು ಹಾಗೂ ಸ್ವಿಮ್ಮಿಂಗ್ ಫೂಲ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ಶಾಪಿಂಗ್ ಮಾಲ್ ಒಳಗೆ ಹೋಗಲು ಕೊರೊನಾ ಟೆಸ್ಟ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಕಾರ್ಯಕ್ರಮ, ಕಲ್ಯಾಣ ಮಂಟಪಗಳಲ್ಲಿ 200 ಜನರು ಮಾತ್ರ ಸೇರಲು ಮಾತ್ರ ಅನುಮತಿ ನೀಡಲಾಗಿದೆ. ಅಪಾರ್ಟ್ ಮೆಂಟ್‌ಗಳಲ್ಲಿರುವ ಪಾರ್ಟಿ ಹಾಲ್ ಬಂದ್ ಮಾಡಬೇಕು. ಸಿನಿಮಾ ಹಾಲ್‌ಗಳಲ್ಲಿ ಶೇ.50 ಜನರಿಗೆ ಮಾತ್ರ ಅವಕಾಶ. ಥಿಯೇಟರ್‌ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಪ್ರಸ್ತಾವನೆ ಒಪ್ಪಿದಲ್ಲಿ ಮುಂದಿನ ವಾರದಿಂದಲೇ ಕಟ್ಟುನಿಟ್ಟಿನ ನಿಯಮ ಮತ್ತೆ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!