JEE ಮುಖ್ಯ ಪರೀಕ್ಷೆ ಮುಂದಕ್ಕೆ: ರಮೇಶ್ ಪೊಕ್ರಿಯಾಳ್ - BC Suddi
JEE ಮುಖ್ಯ ಪರೀಕ್ಷೆ ಮುಂದಕ್ಕೆ: ರಮೇಶ್ ಪೊಕ್ರಿಯಾಳ್

JEE ಮುಖ್ಯ ಪರೀಕ್ಷೆ ಮುಂದಕ್ಕೆ: ರಮೇಶ್ ಪೊಕ್ರಿಯಾಳ್

 

ನವದೆಹಲಿ : ಮೇ.2021ರಂದು ನಿಗದಿ ಪಡಿಸಿದ್ದಂತ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಳ್ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ಕೊರೋನಾ ಸೋಂಕಿನ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಜೆಇಇ (ಮುಖ್ಯ) – ಮೇ 2021 ಅಧಿವೇಶನವನ್ನು ಮುಂದೂಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಎನ್ ಟಿಎ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ಅವರು ತಿಳಿಸಿದ್ದಾರೆ.