ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು: ಮಾಜಿ ಸಚಿವ ಎಚ್ ಡಿ ರೇವಣ್ಣ - BC Suddi
ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು: ಮಾಜಿ ಸಚಿವ ಎಚ್ ಡಿ ರೇವಣ್ಣ

ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು: ಮಾಜಿ ಸಚಿವ ಎಚ್ ಡಿ ರೇವಣ್ಣ

ಬೆಂಗಳೂರು: “ಕುಮಾರಸ್ವಾಮಿ ಬಳಿ ಕೆಲವು ಗ್ರಹಗಳಿದ್ದು, ಈಗ ಅದು ಡಿಕೆ ಶಿವಕುಮಾರ್ ಬಳಿ ಸೇರಿವೆ. ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದರು, ಆ ಗ್ರಹದ ಪರಿಣಾಮ ಡಿಕೆಶಿ ಅನುಭವಿಸುವುದು ಬೇಡ ಎಂಬುವುದು ನಮ್ಮ ಮನವಿ. ಕೆಟ್ಟ ಗ್ರಹಗಳೆಲ್ಲ ನಮ್ಮ ಪಕ್ಷದಿಂದ ಹೋದಷ್ಟು ಒಳ್ಳೆಯದೇ” ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಇತ್ತೀಚಿಗೆ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪಗೆ ಟಾಂಗ್ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜೆಡಿಎಸ್‌ನಲ್ಲಿ ಇನ್ನೂ ಕೆಲವು ಗ್ರಹಗಳಿದ್ದು, ಅವು ಹೋದರೆ ಎಲ್ಲವೂ ಸ್ವಚ್ಚವಾಗುತ್ತದೆ. ಕಾಂಗ್ರೆಸ್‌ನಲ್ಲಿ ಗ್ರಹಗಳು ಕಡಿಮೆಯಿದೆ. ಇಂತಹ ಗ್ರಹಗಳೆಲ್ಲ ಹೋದರೆ ಅವರಿಗೆ ಒಳ್ಳೆಯದಂತೂ ಆಗಲ್ಲ. ಭಗವಂತ ಶಿವಕುಮಾರ್ ಅವರಿಗೆ ಒಳ್ಳೆಯದು ಮಾಡಲಿ” ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು “ಒಂಭತ್ತು ಗ್ರಹಗಳು ಸುತ್ತುತ್ತವೆ ಮತ್ತು ಗ್ರಹಗಳು ಪಥ ಬದಲಿಸುತ್ತಿವೆ. ಡಿಕೆಶಿ ಅದನ್ನ ಬರಮಾಡಿಕೊಳ್ತಿದ್ದಾರೆ. ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು. ಗ್ರಹಗಳು ಹೋದ ಮೇಲೆ ಕುಮಾರಣ್ಣ ಅವರಿಗೆ ಇನ್ನೂ ಒಳ್ಳೆಯದು ಆಗುತ್ತದೆ. 2023ಕ್ಕೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ” ಎಂದು ಹೇಳಿದ್ದಾರೆ.

 

error: Content is protected !!