ಮಂಥರೆಯ ಮಾತು ಕೇಳುತ್ತಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಶಾಸಕ ಜಿ.ಟಿ. ದೇವೇಗೌಡ - BC Suddi
ಮಂಥರೆಯ ಮಾತು ಕೇಳುತ್ತಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಶಾಸಕ ಜಿ.ಟಿ. ದೇವೇಗೌಡ

ಮಂಥರೆಯ ಮಾತು ಕೇಳುತ್ತಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಶಾಸಕ ಜಿ.ಟಿ. ದೇವೇಗೌಡ

ಮೈಸೂರು: “ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ನಾಶವಾಯಿತು, ಅದರಂತೆ ಇದೀಗ ಮೈಸೂರಿನಲ್ಲಿ ಶಕುನಿ, ಮಂಥರೆಯ ಮಾತು ಕೇಳುತ್ತಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ” ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೈಮುಲ್ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ ಕುಮಾರಸ್ವಾಮಿ ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ” ಎಂದರು.

ಇನ್ನು ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದು, ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸಾ.ರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

 

error: Content is protected !!