ಜಪಾನ್ ಸರ್ಕಾರ ನೌಕರರ ವೇತನ ಕಡಿತಗೊಳಿಸಿದೆ ಯಾಕೆ ಗೊತ್ತಾ..? - BC Suddi
ಜಪಾನ್ ಸರ್ಕಾರ ನೌಕರರ ವೇತನ ಕಡಿತಗೊಳಿಸಿದೆ  ಯಾಕೆ ಗೊತ್ತಾ..?

ಜಪಾನ್ ಸರ್ಕಾರ ನೌಕರರ ವೇತನ ಕಡಿತಗೊಳಿಸಿದೆ ಯಾಕೆ ಗೊತ್ತಾ..?

ಎಲ್ಲೋ ಒಂದೊಂದು ದಿನ ನಿಮ್ಮ ದೈನಂದಿನ ಕೆಲಸದ ಅವಧಿ ಪೂರ್ಣಗೊಳ್ಳುವ ಕೆಲವೇ ನಿಮಿಷಗಳ ಮೊದಲು ಕಚೇರಿಯಿಂದ ತೆರಳುವುದು ಅಥವಾ ಲಾಗ್‌ಔಟ್ ಆಗುವುದು ಅಪರಾಧವಲ್ಲ. ಎರಡೇ ನಿಮಿಷ ಮೊದಲು ಕಚೇರಿಯಿಂದ ಮನೆಗೆ ತೆರಳಿದ್ದಕ್ಕಾಗಿ ಜಪಾನ್ ಸರ್ಕಾರ ನೌಕರರ ವೇತನ ಕಡಿತಗೊಳಿಸಿದೆ.

ನಿಗದಿಪಡಿಸಿದ ಕೆಲವು ಪೂರ್ಣಗೊಳ್ಳುವವರೆಗೆ ಸಾಮಾನ್ಯವಾಗಿ ಯಾರೂ ಕೂಡ ಕಚೇರಿಯಿಂದ ತೆರಳುವುದಿಲ್ಲ.ಆದರೆ, ಜಪಾನ್‌ನಲ್ಲಿ ನಿತ್ಯ ತಮ್ಮ ಕೆಲಸದ ಅವಧಿಗೂ ಮುನ್ನವೇ ಕಚೇರಿಯಿಂದ ನೌಕರರು ತೆರಳುತ್ತಿರುವ ವಿಷಯ ಬಹಿರಂಗಗೊ0ಡಿದೆ. ನೌಕರರಿಗೆ ಜಪಾನ್ ಸರ್ಕಾರ ಶಿಕ್ಷೆಯನ್ನೂ ನೀಡಿದೆ. ಸಾಕಷ್ಟು ಮಂದಿ ತಮ್ಮ ಕೆಲಸದ ಅವಧಿ ಮುಗಿಯುವ ಮುನ್ನವೇ ಮನೆಗೆ ತೆರಳಿದ್ದು ಅವರ ವೇತನ ಕಡಿತಗೊಳಿಸಲು ಆದೇಶಿಸಿದೆ.

ಮೇ 2019 ರಿಂದ ಜನವರಿ 2021ರ ನಡುವೆ ಕೆಲಸದ ಅವಧಿಗೂ ಮುನ್ನವೇ ಮನೆಗೆ ತೆರಳಿದ 316 ಪ್ರಕರಣಗಳು ನಡೆದಿವೆ.ಇದು ಫುನಾಬಾಶಿ ಸಿಟಿ ಬೋರ್ಡ್ ಆಫ್ ಎಜುಕೇಷನ್‌ನಲ್ಲಿ ನಡೆದ ಘಟನೆಯಾಗಿದೆ. ಕಚೇರಿಯಿಂದ ಬೇಗ ತೆರಳಲು ನೆರವಾಗಿದ್ದ 59  ವರ್ಷದ ನೌಕರರಿಗೆ ಮೂರು ತಿಂಗಳು ಹತ್ತನೇ ಒಂದು ಭಾಗದಷ್ಟು ವೇತನ ಕಡಿತಗೊಳ್ಳಲಿದೆ.

ಮಹಿಳಾ ಉದ್ಯೋಗಿ 5.17ಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುವುದಕ್ಕಾಗಿ 5.15ಕ್ಕೆ ಕಚೇರಿಯಿಂದ ತೆರಳುತ್ತಿದ್ದರು ಎಂಬುದು ತಿಳಿದುಬಂದಿದೆ.60 ವರ್ಷದ ಇಬ್ಬರು ನೌಕರರಿಗೆ ಎಚ್ಚರಿಕೆ ನೀಡಲಾಗಿದೆ, ನಾಲ್ಕು ಇತರೆ ನೌಕರರಿಗೆ ನೋಟಿಸ್ ನೀಡಲಾಗಿದೆ. 2018 ರಲಲ್ಲಿ 64 ವರ್ಷದ ಉದ್ಯೋಗಿಯೊಬ್ಬರು  ಮೂರು ನಿಮಿಷಗಳ ಮೊದಲೇ ಊಟ ಮಾಡಿದ್ದಕ್ಕಾಗಿ ಶಿಕ್ಷೆ ನೀಡಲಾಗಿತ್ತು.

 

error: Content is protected !!