'ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ, ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ' - ಕಾಂಗ್ರೆಸ್ - BC Suddi
‘ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ, ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ’ – ಕಾಂಗ್ರೆಸ್

‘ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ, ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ’ – ಕಾಂಗ್ರೆಸ್

ಬೆಂಗಳೂರು,:  ”ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೃದಯ ಮಾತ್ರ ಕರಗುತ್ತಿಲ್ಲ” ಎಂದು ಕಾಂಗ್ರೆಸ್‌ ಟೀಕಿಸಿದೆ.

ದೇಶದಲ್ಲಿ ಎರಡನೇ ಕೊರೊನಾ ಅಲೆ ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದು ದಿನವಿಡಿ ಬಿಡುವಿಲ್ಲದ ಶವಸಂಸ್ಕಾರದ ಪರಿಣಾಮವಾಗಿ ಸೂರತ್‌ನಲ್ಲಿ ಸ್ಮಶಾನದಲ್ಲಿ ಬಳಕೆಯಾಗುವ ಲೋಹದ ಕಟ್ಟುಗಳು ಬಿಸಿಗೆ ಕರಗುತ್ತಿದೆ ಎಂದು ವರದಿಯಾಗಿದೆ.

ಈ ವರದಿಯನ್ನು ಉಲ್ಲೇಖ ಮಾಡಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ”ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ. ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ” ಎಂದು ಹೇಳಿದೆ.

ಇನ್ನು ದೇಶದಲ್ಲಿ ಈವರೆಗೆ 1,45,26,609 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಪೈಕಿ 1,75,649 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 1,55,29,157 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು ಈ ಪ್ರಕಾರ ದೇಶದಲ್ಲಿ ಈವರೆಗೆ ಶೇ. 1.1 ರಷ್ಟು ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ಕೊರೊನಾ 2ನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸೋತಿವೆ: ಸಿದ್ದರಾಮಯ್ಯ