14ನೇ ಐಪಿಎಲ್ ಗೆ ಕ್ಷಣಗಣನೆ ಆರಂಭ: IPL ಮೇಲೆ ಕೊರೊನಾ ಕರಿನೆರಳು! - BC Suddi
14ನೇ ಐಪಿಎಲ್ ಗೆ ಕ್ಷಣಗಣನೆ ಆರಂಭ: IPL ಮೇಲೆ ಕೊರೊನಾ ಕರಿನೆರಳು!

14ನೇ ಐಪಿಎಲ್ ಗೆ ಕ್ಷಣಗಣನೆ ಆರಂಭ: IPL ಮೇಲೆ ಕೊರೊನಾ ಕರಿನೆರಳು!

ಮುಂಬಯಿ : 14ನೇ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಕೊರೊನಾ ತನ್ನ ಕ್ರೌರ್ಯತೆಯನ್ನು ಮೆರೆಯುತ್ತಿದೆ. ಹೌದು ಕಳೆದೆರಡು ದಿನಗಳಿಂದ “ಪಾಸಿಟಿವ್ ಕೇಸ್’ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಿಂದ ಹೊರಬಿದ್ದಿದೆ. ಇಲ್ಲಿ ಕೆಲಸ ಮಾಡುತ್ತಿರುವ ಒಟ್ಟು 10 ಮಂದಿ ಮೈದಾನ ಸಿಬಂದಿಗೆ ಹಾಗೂ 6 ಮಂದಿ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಐಪಿಎಲ್ ಹಿನ್ನೆಲೆಯಲ್ಲಿ ಮೈದಾನದ ಸಿಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು ಈ ವೇಳೆ ಸೋಂಕು ಪತ್ತೆಯಾಗಿದೆ. ಇವರನ್ನು ಐಸೊಲೇಶನ್ ನಲ್ಲಿ ಇರಿ ಸಲಾಗಿದೆ. ಇಲ್ಲಿ ನಡೆಯುವ ಐಪಿಎಲ್ ಪಂದ್ಯ ಮುಕ್ತಾಯಗೊಳ್ಳುವವರೆಗೆ ಇವರೆಲ್ಲರಿಗೂ ಕ್ರೀಡಾಂಗಣದಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

“ತಂಡಗಳ ಆಟಗಾರರೆಲ್ಲ ಈಗಾಗಲೇ ಜೈವಿಕ ಸುರಕ್ಷಾ ವಲಯದಲ್ಲಿದ್ದಾರೆ. ಅಲ್ಲದೇ ವಾಂಖೇಡೆಯಲ್ಲಿ ಯಾವುದೇ ಆಟಗಾರರಿಲ್ಲ. ಎಲ್ಲರೂ ಬ್ರೆಬೋರ್ನ್ ಸ್ಟೇಡಿಯಂ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಡಿ.ವೈ. ಪಾಟೀಲ್ ಸ್ಟೇಡಿಯಂಗಳಲ್ಲಿದ್ದಾರೆ. ಹೀಗಾಗಿ ವಾಂಖೇಡೆಯಲ್ಲಿ ನಡೆಯುವ ಪಂದ್ಯಗಳ ಬಗ್ಗೆ ಯಾವುದೇ ಆತಂಕ ಪಡಬೇಕಿಲ್ಲ. ವೇಳಾಪಟ್ಟಿಯಂತೆ ಟೂರ್ನಿ ಆರಂಭಿಸಲು ನಾವು ಸಿದ್ಧರಿದ್ದೇವೆ’ ಎಂದು ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಂಖೇಡೆಯಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ.

ಒಂದು ವೇಳೆ ಮುಂಬಯಿಯಲ್ಲಿ ಕೋವಿಡ್ ಕೇಸ್ ತೀವ್ರ ಹೆಚ್ಚಳಗೊಂಡರೆ ಇಂದೋರ್ ಮತ್ತು ಹೈದರಾ ಬಾದನ್ನು ಮೀಸಲು ತಾಣವನ್ನಾಗಿ ಇರಿಸಿಕೊಳ್ಳಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಅಕ್ಷರ್ ಪಟೇಲ್ ಗೆ ಕೊರೊನಾ ಸೋಂಕು ತಗುಲಿದ್ದು, ಐಸೊಲೇಶನ್ ನಲ್ಲಿದ್ದಾರೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಶೀಘ್ರದಲ್ಲಿ ಗುಣಮುಖರಾಗಿ ಮತ್ತೆ ತಂಡ ಸೇರುವ ವಿಶ್ವಾಸವಿದೆ’ ಎಂದು ಪ್ರಾಂಚೈಸಿ ತಿಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್ ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್ ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.

error: Content is protected !!