ಇನ್‌ಸ್ಟಾಗ್ರಾಂನಲ್ಲಿ ಇನ್ನೊಂದು ಟಿಕ್‌ಟಾಕ್‌ ಶೈಲಿಯ ಫೀಚರ್‌ : ರೀಲ್ಸ್‌ ರಿಮೀಕ್ಸ್‌ - BC Suddi
ಇನ್‌ಸ್ಟಾಗ್ರಾಂನಲ್ಲಿ ಇನ್ನೊಂದು ಟಿಕ್‌ಟಾಕ್‌ ಶೈಲಿಯ ಫೀಚರ್‌ : ರೀಲ್ಸ್‌ ರಿಮೀಕ್ಸ್‌

ಇನ್‌ಸ್ಟಾಗ್ರಾಂನಲ್ಲಿ ಇನ್ನೊಂದು ಟಿಕ್‌ಟಾಕ್‌ ಶೈಲಿಯ ಫೀಚರ್‌ : ರೀಲ್ಸ್‌ ರಿಮೀಕ್ಸ್‌

ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಒಂದಾದ ಇನ್‌ಸ್ಟಾಗ್ರಾಂ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಪೀಚರ್‌ಗಳನ್ನು ಪರಿಚಯ ಮಾಡಿದೆ. ಈಗ ಟಿಕ್‌ಟಾಕ್‌ ಮಾದರಿಯ ಫೀಚರ್ಸ್‌ ಅನ್ನು ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಪರಿಚಯಿಸಿದೆ. ಈ ಫೀಚರ್‌ ಮೂಲಕ ಬಳಕೆದಾರರು ತಮ್ಮ ವೀಡಿಯೊವನ್ನು ಇತರ ಬಳಕೆದಾರರೊಂದಿಗೆ ಜೋಡಿಸುವ ಮೂಲಕ ರೀಲ್ ಅನ್ನು ರೀಮಿಕ್ಸ್ ಮಾಡಬಹುದಾಗಿದೆ.

ಟಿಕ್‌ಟಾಕ್‌ನ ಡ್ಯುಯೆಟ್‌ಗಳನ್ನು ಹೋಲುವ ಈ ಇನ್‌ಸ್ಟಾಗ್ರಾಂ ರೀಲ್ಸ್‌ ರಿಮೀಕ್ಸ್‌ನಲ್ಲಿ ಬಳಕೆದಾರರು ರಿಮೀಕ್ಸ್‌ ದಿಸ್‌ ರೀಲ್‌ ಎಂದು ಆಯ್ಕೆ ಮಾಡಬಹುದಾಗಿದೆ. ಹೊಸ ವಿಡಿಯೋವನ್ನು ರೆಕಾರ್ಡ್ ಮಾಡಬಹುದು ಅಥವಾ ಪೋನ್‌ನಲ್ಲೇ ಇರುವ ವಿಡಿಯೋವನ್ನು ಆಯ್ಕೆ ಮಾಡಬಹುದು. ರೀಲ್ ಅನ್ನು ರೀಮಿಕ್ಸ್ ಮಾಡಲು ಎಡಿಟಿಂಗ್ ಆಯ್ಕೆಗಳು ಕೂಡ ಒಂದೇ ಆಗಿರುತ್ತವೆ. ಅಲ್ಲದೆ ಇವುಗಳಲ್ಲಿ ಎಫೆಕ್ಟ್‌ಗಳನ್ನು ಸೇರಿಸುವುದು, ಟೈಮರ್, ವೇಗವನ್ನು ಸೆಟ್‌ ಮಾಡುವುದು, ಆಡಿಯೊವನ್ನು ಸೇರಿಸುವುವ ಆಯ್ಕೆಗಳು ಕೂಡಾ ಇದೆ.

ಕಳೆದ ಆಕ್ಟೋಬರ್‌ ತಿಂಗಳಲ್ಲಿ ಆಯ್ದ ಬಳಕೆದಾರರಿಗೆ ಈ ಫೀಚರ್ಸ್ ನೀಡಲಾಗಿತ್ತು. ಆದರೆ ಈಗ ಜಾಗತಿಕವಾಗಿ ಎಲ್ಲರಿಗೂ ಲಭ್ಯವಿದೆ. ತಮ್ಮ ಹಳೆಯ ರೀಲ್‌ಗಳನ್ನು ರೀಮಿಕ್ಸ್ ಮಾಡಲು ಬಯಸುವ ಬಳಕೆದಾರರು ಅದನ್ನು ತಾವೇ ಸಕ್ರಿಯಗೊಳಿಸಬೇಕಾಗಿದೆ. ರೀಲ್‌ನ ಮೂರು ಡಾಟ್ ಮೆನು ಬಟನ್ ಟ್ಯಾಪ್ ಮಾಡುವ ಮೂಲಕ ಮತ್ತು “ರೀಮಿಕ್ಸಿಂಗ್ ಅನ್ನು ಸಕ್ರಿಯಗೊಳಿಸಿ” ಆಯ್ಕೆ ಮಾಡುವ ಮೂಲಕ ಇದನ್ನು ಮಾಡಬಹುದಾಗಿದೆ. ರೀಮಿಕ್ಸಿಂಗ್ ಅನ್ನು ನಿಷ್ಕ್ರಿಯಗೊಳಿಸಲು ಒಂದು ಆಯ್ಕೆ ಇದೆ. ಇದಕ್ಕಾಗಿ ಸೆಟ್ಟಿಂಗ್‌ನಲ್ಲಿ ಗೌಪ್ಯತೆ, ರೀಲ್‌ಗಳು, ರೀಮಿಕ್ಸಿಂಗ್ ಅನ್ನು ತೆರೆದು ಆಯ್ಕೆ ಮಾಡಬೇಕಾಗಿದೆ.

ಉಪಚುನಾವಣೆ ನಡೆಯುತ್ತಿರುವ ಈಗಿನ ಸಂದರ್ಭದಲ್ಲಿ ಸಚಿವರು ಈ ರೀತಿಯಾಗಿ ಮಾಡಿರುವುದರಿಂದ ಚುನಾವಣೆ ಮೇಲೆ ಪರಿಣಾಮ : ರೇಣುಕಾಚಾರ್ಯ

error: Content is protected !!