2 ಲಕ್ಷ ದಾಟಿದ ಸೋಂಕು : ದೇಶದಲ್ಲಿ 15,69,743 ಸಕ್ರಿಯ ಕೇಸ್ - BC Suddi
2 ಲಕ್ಷ ದಾಟಿದ ಸೋಂಕು : ದೇಶದಲ್ಲಿ 15,69,743 ಸಕ್ರಿಯ ಕೇಸ್

2 ಲಕ್ಷ ದಾಟಿದ ಸೋಂಕು : ದೇಶದಲ್ಲಿ 15,69,743 ಸಕ್ರಿಯ ಕೇಸ್

ನವದೆಹಲಿ : ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ ದೇಶದಲ್ಲಿ ನಿನ್ನೆ ಒಂದೇ ದಿನ ದೇಶದಲ್ಲಿ 2,17,353 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,42,91,917ಕ್ಕೆ ಏರಿಕೆಯಾಗಿದೆ.

ಇನ್ನು ಇದೆ 24 ಗಂಟೆಗಳಲ್ಲಿ 1,185 ಮಂದಿ ಸಾವನಪ್ಪಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 1,74,308 ಕ್ಕೆ ಏರಿಕೆಯಾಗಿದೆ.

ಸದ್ಯ 15,69,743 ಸಕ್ರಿಯ ಕೇಸ್ ಗಳಿದ್ದು, 1,25,47,866 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,18,302 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಿಎಂ ಬಿಎಸ್‍ವೈ ತುರ್ತು ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ 23 ನಿರ್ಧಾರಗಳು