ಭಾರತದ ಕೊರೊನಾ ಲಸಿಕೆ ಅಭಿಯಾನಕ್ಕೆ ರಷ್ಯಾ, ಚೀನಾದ ಲಸಿಕೆ ಆಮದು ಮಾಡ್ತಾರಂತೆ : ಕಾಂಗ್ರೆಸ್‌ ಟೀಕೆ - BC Suddi
ಭಾರತದ ಕೊರೊನಾ ಲಸಿಕೆ ಅಭಿಯಾನಕ್ಕೆ ರಷ್ಯಾ, ಚೀನಾದ ಲಸಿಕೆ ಆಮದು ಮಾಡ್ತಾರಂತೆ : ಕಾಂಗ್ರೆಸ್‌ ಟೀಕೆ

ಭಾರತದ ಕೊರೊನಾ ಲಸಿಕೆ ಅಭಿಯಾನಕ್ಕೆ ರಷ್ಯಾ, ಚೀನಾದ ಲಸಿಕೆ ಆಮದು ಮಾಡ್ತಾರಂತೆ : ಕಾಂಗ್ರೆಸ್‌ ಟೀಕೆ

ಬೆಂಗಳೂರು: ಭಾರತದ ಕೊರೊನಾ ಲಸಿಕಾ ಅಭಿಯಾನಕ್ಕೆ ರಷ್ಯಾ, ಚೀನಾ ಸೇರಿದಂತೆ ವಿದೇಶಗಳಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಾರಂತೆ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್‌ ಟೀಕೆ ಮಾಡಿದೆ.

ಕೊರೊನಾ ವೈರಸ್‌ನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿಯವರ ಕರೆಯಂತೆ ದೇಶದಾದ್ಯಂತ ಎಪ್ರಿಲ್‌ 11ರಿಂದ ನಾಲ್ಕು ದಿನಗಳವರೆಗೆ ನಡೆಯುವ ಕೊರೊನಾ ಲಸಿಕೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಏತನ್ಮಧ್ಯೆ ಭಾರತದಲ್ಲಿ ಕೊರೊನಾ ಲಸಿಕೆಗಳ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.

ಈ ನಿಟ್ಟಿನಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಭಾರತದ ಕಂಪೆನಿಗಳು ತಯಾರಿಸಿದ ಸುಮಾರು 6.5 ಕೋಟಿ ಲಸಿಕೆಗಳನ್ನು ವಿದೇಶಿ ರಫ್ತಿಗೆ ಅವಕಾಶ ನೀಡಿ ಅದನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಂಡಿದ್ದ ನರೇಂದ್ರ ಮೋದಿ ಅವರು ಈಗ ಭಾರತದ ಲಸಿಕೆ ಕಾರ್ಯಕ್ರಮಕ್ಕೆ ರಷ್ಯಾ, ಚೀನಾ ಸೇರಿದಂತೆ ವಿದೇಶಗಳಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಾರಂತೆ ಎಂದು ಟೀಕಿಸಿದ್ದು ತುಘಲಕ್‌ ಆಡಳಿತ ಅಂದರೆ ಇದೇ ಅಲ್ಲವೇ ಬಿಜೆಪಿಯವರೇ ಎಂದು ಪ್ರಶ್ನಿಸಿದೆ.

ನರೇಂದ್ರ ಮೋದಿ ಅವರು ಗುಜರಾತ್‌‌ನ ಸಿಎಂ ಆದ ಬಳಿಕ ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ದಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಜನನಾಯಕ : ಡಿಸಿಎಂ ಗೋವಿಂದ ಕಾರಜೋಳ