ಕೊರೊನಾ ಹೆಚ್ಚಳ ಹಿನ್ನೆಲೆ : ಭಾರತ ಪ್ರವಾಸ ರದ್ದು ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ - BC Suddi
ಕೊರೊನಾ ಹೆಚ್ಚಳ ಹಿನ್ನೆಲೆ : ಭಾರತ ಪ್ರವಾಸ ರದ್ದು ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಕೊರೊನಾ ಹೆಚ್ಚಳ ಹಿನ್ನೆಲೆ : ಭಾರತ ಪ್ರವಾಸ ರದ್ದು ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್ : ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿರುವ ಕಾರಣದಿಂದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಹಿಂದೆ ಜನವರಿ ಜಾನ್ಸನ್ ಅವರ ಭಾರತ ಭೇಟಿಯನ್ನು ನಿಗದಿಪಡಿಸಲಾಗಿತ್ತು.

ಆದರೆ ಯುಕೆಯಲ್ಲಿ ಲಾಕ್‌ಡೌನ್‌ ಆದ ಹಿನ್ನೆಲೆ ಪ್ರವಾಸ ರದ್ದು ಮಾಡಲಾಯಿತು. ಈಗ ಈ ಭೇಟಿಯನ್ನು ಏಪ್ರಿಲ್ 26 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ಭೇಟಿಯನ್ನು ರದ್ದುಪಡಿಸಲಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಚೇರಿ ಮಾಹಿತಿ ನೀಡಿದೆ.

ವರದಿಗಳ ಪ್ರಕಾರ ಏಪ್ರಿಲ್‌ನಲ್ಲಿ ಮರು ನಿಗದಿಪಡಿಸಿದ್ದ ಭೇಟಿಯು ವ್ಯಾಪಾರ ಮತ್ತು ಹೂಡಿಕೆ ಸಂಬಂಧ ವೃದ್ದಿಗಾಗಿ ಮಾಡಲಾಗಿತ್ತು. ಈ ತಿಂಗಳ ಬಳಿಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಭಾರತದ ಪ್ರಧಾನಿ ಹಾಗೂ ಬ್ರಿಟನ್‌ನ ಪ್ರಧಾನಿ ಇಬ್ಬರೂ ಮಾತುಕತೆ ನಡೆಸಲಿದ್ದಾರೆ ಎಂದು ಕೂಡಾ ಪ್ರಧಾನಿ ಕಚೇರಿ ತಿಳಿಸಿದೆ.

 

ಕೊರೊನಾಗೆ ಬಲಿಯಾದ ಮುಸ್ಲಿಮರ ಅಂತ್ಯಕ್ರಿಯೆಗೆ ಪ್ರತ್ಯೇಕ ಮೈದಾನಕ್ಕೆ ಜಮೀರ್ ಆಗ್ರಹ