ಹೊಸದಿಲ್ಲಿ: ಭಾರತದ ಪ್ರಸಿದ್ದ ಕುಸ್ತಿ ಪಟುಗಳಾದ ಗೀತಾ- ಬಬಿತಾ ಪೋಗಟ್ ರ ಸಹೋದರಿ ರಿತಿಕಾ ಇಂದು ಮುಂಜಾನೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕುಸ್ತಿ ಕೂಟದಲ್ಲಿ ಸೋಲನುಭವಿಸಿದ ಹತಾಶೆಯಿಂದ ರಿತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.
17 ವರ್ಷದ ರಿತಿಕಾ ಅವರು ಗೀತಾ ಪೋಗಟ್ ಮತ್ತು ಬಬಿತಾ ಪೋಗಟ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಈಕೆ ಮಾರ್ಚ್ 14ರಂದು ರಾಜ್ಯ ಮಟ್ಟದ ಕೂಟದ ಫೈನಲ್ ನಲ್ಲಿ ಸೋಲನುಭವಿಸಿದ್ದರು. ಫೈನಲ್ ಪಂದ್ಯದಲ್ಲಿ ಕೇವಲ ಒಂದು ಅಂಕದಿಂದ ಸೋಲನುಭವಿಸಿದ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಮಹಾವೀರ್ ಸಿಂಗ್ ಪೋಗಟ್ ಅವರ ಬಳಿ ರಿತಿಕಾ ತರಬೇತಿ ಪಡೆಯುತ್ತಿದ್ದಾರೆ. ಫೈನಲ್ ಪಂದ್ಯ ನಡೆಯುವ ವೇಳೆ ಮಹಾವೀರ್ ಸಿಂಗ್ ಪೋಗಟ್ ಕೂಡಾ ಸ್ಥಳದಲ್ಲಿದ್ದರು.