ಭಾರತದಲ್ಲಿ 59 ದಿನಗಳಲ್ಲಿ ಎಷ್ಟು ಜನ ಕೊರೊನಾವೈರಸ್ ಲಸಿಕೆ ಪಡೆದಿದ್ದಾರೆ ಗೊತ್ತಾ..? - BC Suddi
ಭಾರತದಲ್ಲಿ 59 ದಿನಗಳಲ್ಲಿ ಎಷ್ಟು ಜನ ಕೊರೊನಾವೈರಸ್ ಲಸಿಕೆ ಪಡೆದಿದ್ದಾರೆ ಗೊತ್ತಾ..?

ಭಾರತದಲ್ಲಿ 59 ದಿನಗಳಲ್ಲಿ ಎಷ್ಟು ಜನ ಕೊರೊನಾವೈರಸ್ ಲಸಿಕೆ ಪಡೆದಿದ್ದಾರೆ ಗೊತ್ತಾ..?

ನವದೆಹಲಿ: ಕಳೆದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಫೆಬ್ರವರಿ.2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 56 ದಿನಗಳೇ ಕಳೆದಿದ್ದು, ಎರಡನೇ ಹಂತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ. ಕಳೆದ ಒಂದೇ ದಿನ 18 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಇದರ ಕುರಿತು ಮಾ.15ರಂದು ಸಂಜೆ 7ಗಂಟೆ ವೇಳೆಗೆ ದೇಶದಲ್ಲಿ18.63 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ 59 ದಿನಗಳಲ್ಲಿ 3,17,71,661 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 74,08,521ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 43,97,613 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 74,26,479 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 13,23,527 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್.01ರಿಂದ ಆರಂಭವಾಗಿದ್ದು, ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 16,96,497 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 95,19,024 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 45ರಿಂದ 60 ವರ್ಷದೊಳಗಿನವರು – 2,32,483 ಮತ್ತು 60 ವರ್ಷ ಮೇಲ್ಪಟ್ಟವರು – 12,26,831.

 

 

error: Content is protected !!