ಕೇಪ್‌ಟೌನ್: ಉತ್ತಮ ಆಲ್‌ರೌಂಡರ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ 2-1 ಅಂತರದಿಂದ ಸರಣಿ ವಶಕ್ಕೆ ಪಡೆದುಕೊಂಡಿದೆ.

ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ರಿಷಭ್ ಪಂತ್ ಏಕಾಂಗಿ ಹೋರಾಟದ ಶತಕ (100 ರನ್‌) ಸಹಾಯದಿಂದ 198 ಗಳಿಸಲು ಶಕ್ತವಾಗಿತ್ತು. ಇದೊಂದಿಗೆ 212 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಕೀಗನ್ ಪೀಟರ್ಸನ್ 82 ರನ್‌, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 41 ರನ್, ತೆಂಬ ಬವುಮ 32 ರನ್ ಸಹಾಯದಿಂದ 3 ವಿಕೆಟ್‌ ನಷ್ಟಕ್ಕೆ 212 ರನ್ ದಾಖಲಿ ಗೆದ್ದು ಬೀಗಿದೆ.

ಸಂಕ್ಷಿಪ್ತ ಸ್ಕೋರ್ ವಿವರ:
ಭಾರತದ ಮೊದಲ ಇನ್ನಿಂಗ್ಸ್‌: 77.3 ಓವರ್‌, 223 ರನ್
ದ.ಆಫ್ರಿಕಾದ ಮೊದಲ ಇನ್ನಿಂಗ್ಸ್‌: 76.3 ಓವರ್‌, 210 ರನ್
ಭಾರತದ ಎರಡನೇ ಇನ್ನಿಂಗ್ಸ್‌: 67.3 ಓವರ್‌, 198 ರನ್
ದ.ಆಫ್ರಿಕಾ ಎರಡನೇ ಇನ್ನಿಂಗ್ಸ್‌: 63.3 ಓವರ್‌, 212 ರನ್‌ (3 ವಿಕೆಟ್‌)