ಕಾಂಗ್ರೆಸ್ ನಿಂದ ಸ್ವಂತ ಚಾನೆಲ್ 'ಐಎನ್‌ಸಿ ಟಿವಿ' - BC Suddi
ಕಾಂಗ್ರೆಸ್ ನಿಂದ ಸ್ವಂತ ಚಾನೆಲ್ ‘ಐಎನ್‌ಸಿ ಟಿವಿ’

ಕಾಂಗ್ರೆಸ್ ನಿಂದ ಸ್ವಂತ ಚಾನೆಲ್ ‘ಐಎನ್‌ಸಿ ಟಿವಿ’

ನವದೆಹಲಿ : ವಿಪಕ್ಷ ಕಾಂಗ್ರೆಸ್ ಪಕ್ಷವು ತನ್ನದೇ ಸ್ವಂತ ಚಾನೆಲ್ ಆರಂಭಿಸಲಿದೆ. ಡಿಜಿಟಿಲ್ ವೇದಿಕೆಯ ಮೂಲಕ ಯೂಟ್ಯೂಬ್‌ ನಲ್ಲಿ ಇದೇ 24ರಿಂದ “ಐಎನ್‌ಸಿ ಟಿವಿ’ ಎಂಬ ಹೆಸರಿನ ಹೊಸ ಚಾನೆಲ್‌ ಆರಂಭಿಸಲಿದೆ. ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಟಿವಿ ಚಾನೆಲ್ ಹುಟ್ಟು ಹಾಕಲಿದ್ದೇವೆ ಎಂದು ಪಕ್ಷ ತಿಳಿಸಿದೆ.

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಕ್ತಾರ ರಣದೀಪ್‌ ಸುರ್ಜೆವಾಲಾಈ ಬಗ್ಗೆ ಮಾಹಿತಿ ನೀಡಿದ್ದು, ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು, ವಿರೋಧ ಪಕ್ಷಗಳ ವಿರುದ್ಧ ಆರೋಪಗಳನ್ನು ಮಾಡುಲು ಹಾಗೂ ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಸಲುವಾಗಿ ಕಾಂಗ್ರೆಸ್ ಈ ವೇದಿಕೆಯನ್ನು ಬಳಸಿಕೊಳ್ಳಲಿದೆ. ಇದರೊಂದಿಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಮತ್ತು ದುರ್ಬಲರ ಧ್ವನಿಯಾಗಿ ಚಾನೆಲ್‌ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ಚಾನೆಲ್‌ ಯಾವ ರೀತಿ ಇರಲಿದೆ ಎಂಬ ಬಗ್ಗೆ ದಿಕ್ಸೂಚಿ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ಚಾನೆಲ್‌ 8 ಗಂಟೆ ಕಾಲ ನೇರಪ್ರಸಾರ ಕಾರ್ಯಕ್ರಮ ನೀಡಲಿದೆ .ವೃತ್ತಿಪರ ಪತ್ರಕರ್ತರೊಬ್ಬರು ಅದರ ನೇತೃತ್ವ ವಹಿಸಲಿದ್ದಾರೆ.

ಹೆಮ್ಮಾರಿ ತಡೆಗೆ ಮಹತ್ವದ ಹೆಜ್ಜೆ: ಮನೆಮನೆಗೆ ತೆರಳಿ ಕೊರೊನಾ ಲಸಿಕೆ ನೀಡಲು ಸಿದ್ಧತೆ