ಮೇ ಆರಂಭದ ವಾರದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ತಲುಪಲಿದೆ : ವೆಂಕಟೇಶ್ ವರ್ಮಾ - BC Suddi
ಮೇ ಆರಂಭದ ವಾರದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ತಲುಪಲಿದೆ : ವೆಂಕಟೇಶ್ ವರ್ಮಾ

ಮೇ ಆರಂಭದ ವಾರದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ತಲುಪಲಿದೆ : ವೆಂಕಟೇಶ್ ವರ್ಮಾ

ನವದೆಹಲಿ: ಮೇ ಆರಂಭದ ವಾರದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ತಲುಪಲಿದೆ ಎಂದು ರಷ್ಯಾದ ಭಾರತೀಯ ರಾಯಭಾರಿ ಬಾಲ ವೆಂಕಟೇಶ್ ವರ್ಮಾ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, “ಮೇ ಆರಂಭದಲ್ಲಿ 150,000 ರಿಂದ 200,000 ಸ್ಪುಟ್ನಕ್ ವಿ ಲಸಿಕೆಗಳನ್ನು ತಲುಪುವ ಸಾಧ್ಯತೆ ಇದ್ದು, ಮೇ ತಿಂಗಳ ಎರಡನೇ ಹಾಗೂ ಕೊನೆಯ ವಾರಗಳಲ್ಲಿ ಇದರ ಪ್ರಮಾಣ ಹೆಚ್ಚಳಾಗಬಹುದು” ಎಂದರು.

ಇನ್ನು “ಜೂನ್‌‌ನಲ್ಲಿ 5 ಮಿಲಿಯನ್‌ಗೆ, 10 ಮಿಲಿಯನ್‌ ಸ್ಪುಟ್ನಿಕ್ ಲಸಿಕೆಗಳನ್ನು ರಷ್ಯಾದಿಂದ ಭಾರತಕ್ಕೆ ತಲುಪುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ. “ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ ಅಥವಾ ರಷ್ಯಾದ ನೇರ ಹೂಡಿಕೆ ನಿಧಿ 5 ಭಾರತೀಯ ಕಂಪನಿಗಳೊಂದಿಗೆ 850 ದಶಲಕ್ಷ ಪ್ರಮಾಣದ ಲಸಿಕೆ ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ ತಿಂಗಳಲ್ಲಿ ಉತ್ಪಾದನೆ ಪ್ರಾರಂಭವಾಗುತ್ತದೆ” ಎಂದರು.

“ರಷ್ಯಾ ಭಾರತಕ್ಕೆ 20 ಆಮ್ಲಜನಕ ಉತ್ಪಾದನಾ ಘಟಕಗಳು, 75 ವೆಂಟಿಲೇಟರ್‌ಗಳು, 150 ಮೆಡಿಕಲ್ ಮಾನಿಟರ್‌ ಗಳು ಮತ್ತು 200,000 ಪ್ಯಾಕ್ ಔಷಧಿಗಳನ್ನು ಕೊರೊನಾ ನಿಯಂತ್ರಣಕ್ಕಾಗಿ ಈ ವಾರದ ಆರಂಭದಲ್ಲಿ ಕಳುಹಿಸಿಕೊಟ್ಟಿದೆ” ಎಂದಿದ್ದಾರೆ.

ರಾಜ್ಯದಲ್ಲಿ ಶುಕ್ರವಾರ 48,296 ಮಂದಿಯಲ್ಲಿ ಕೊರೋನಾ ಸೋಂಕು ದೃಢ