ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ ಡಿಎಫ್ ..! - BC Suddi
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ ಡಿಎಫ್ ..!

ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ ಡಿಎಫ್ ..!

ತಿರುವನಂತಪುರಂ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಏತನ್ಮಧ್ಯೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಈ ಬಾರಿ ಎಲ್ ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸುವತ್ತ ದಾಪುಗಾಲಿಟ್ಟಿದೆ. 140 ಸ್ಥಾನಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಸ್ಥಾನಗಳ ಅಗತ್ಯವಿದೆ.

ಆರಂಭಿಕ ಟ್ರೆಂಡ್ ಪ್ರಕಾರ ಕೇರಳದಲ್ಲಿ ಎರಡನೇ ಬಾರಿಗೆ ಎಲ್ ಡಿಎಫ್ ಆಡಳಿತಕ್ಕೆ ಏರುವ ಮುನ್ಸೂಚನೆ ನೀಡಿದೆ. ಸದ್ಯದ ಮತಎಣಿಕೆಯಲ್ಲಿ ಎಲ್ ಡಿಎಫ್ 76 ಸ್ಥಾನಗಳಲ್ಲಿ, ಯುಡಿಎಫ್ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೊನೆಯ ಸುತ್ತಿನವರೆಗೂ ಎಲ್ ಡಿಎಫ್ ಮೈತ್ರಿಕೂಟ ಇದೇ ಮುನ್ನಡೆ ಕಾಯ್ದುಕೊಂಡರೆ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಲಿದೆ.

ಅಷ್ಟೇ ಅಲ್ಲ 1980ರ ದಶಕದಿಂದ ಕೇರಳ ರಾಜಕೀಯದಲ್ಲಿ ಒಮ್ಮೆ ಎಲ್ ಡಿಎಫ್, ಒಮ್ಮೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು. ಒಂದು ಬಾರಿ ಅಧಿಕಾರಕ್ಕೇರಿದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲವಾಗಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಮತದಾರರ ಎಲ್ ಡಿಎಫ್ ಗೆ ಎರಡನೇ ಅವಧಿಗೆ ಕೈಹಿಡಿದಂತಾಗಿದೆ.

ದೇಶದಲ್ಲಿ ಕೊರೊನಾ ವೈರಸ್ ಆರ್ಭಟ : ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ವ್ಯಾಕ್ಸಿನ್​ ನೀಡಬೇಕು: ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡ ಸೋನಿಯಾ