ನವದೆಹಲಿ: ಲಾಕ್ ಡೌನ್ ಭಯದಲ್ಲಿ ಅತಿ ಹೆಚ್ಚು ಜನ ಬ್ಯಾಂಕಿನಿಂದ ಹಣ ವಿತ್ ಡ್ರಾ: ಹೆಚ್ಚು ಹಣ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿದೆ ಎಂದ ಆರ್ ಬಿ ಐ - BC Suddi
ನವದೆಹಲಿ: ಲಾಕ್ ಡೌನ್ ಭಯದಲ್ಲಿ ಅತಿ ಹೆಚ್ಚು ಜನ ಬ್ಯಾಂಕಿನಿಂದ ಹಣ ವಿತ್ ಡ್ರಾ: ಹೆಚ್ಚು ಹಣ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿದೆ ಎಂದ ಆರ್ ಬಿ ಐ

ನವದೆಹಲಿ: ಲಾಕ್ ಡೌನ್ ಭಯದಲ್ಲಿ ಅತಿ ಹೆಚ್ಚು ಜನ ಬ್ಯಾಂಕಿನಿಂದ ಹಣ ವಿತ್ ಡ್ರಾ: ಹೆಚ್ಚು ಹಣ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿದೆ ಎಂದ ಆರ್ ಬಿ ಐ

ನವದೆಹಲಿ: 2ನೇ ಅಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ದಾಖಲೆಯ ಏರಿಕೆಯ ನಡುವೆ ಹಾಗೂ ಲಾಕ್ ಡೌನ್ ಭಯದಲ್ಲಿ ಅತಿ ಹೆಚ್ಚು ಜನ ಬ್ಯಾಂಕಿನಿಂದ ಹಣ ವಿತ್ ಡ್ರಾ ಮಾಡಿದ್ದಾರೆ ಹಾಗೂ ಹೆಚ್ಚು ಹಣ ಸಾರ್ವಜನಿಕರಲ್ಲಿ ಚಾಲ್ತಿಯಲ್ಲಿದೆ ಎಂದು ಆರ್ ಬಿ ಐ ಮೂಲಗಳ ಹೇಳಿದೆ.

ಕಳೆದ ಎರಡು ತಿಂಗಳುಗಳಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣವು ಪ್ರಾರಂಭವಾಗಿ ತೀವ್ರಗತಿಯತ್ತ ಸಾಗುತ್ತಿದ್ದಂತೆ ಹಣದ ಮೇಲೆ ಸಾರ್ವಜನಿಕರ ಅವಲಂಬನೆ ಹೆಚ್ಚಾಗುತ್ತಾ ಹೋಗಿದ್ದು, ಫೆಬ್ರವರಿ 27 ಮತ್ತು ಏಪ್ರಿಲ್ 9 ರ ನಡುವಿನ ಆರು ವಾರಗಳ ಅವಧಿಯಲ್ಲಿ, ಅತಿಹೆಚ್ಚು ಹಣ ಹಿಂಪಡೆದಿದ್ದಾರೆ. ಅಂದರೆ ಫೆಬ್ರವರಿ 27ರಿಂದ 30,191 ಕೋಟಿ ರೂ.ಗಳಿಂದ ಏರಿಕೆಯತ್ತ ಸಾಗಿ ಗರಿಷ್ಠ 27,87,941 ಕೋಟಿ ರೂಗೆ ತಲುಪಿದೆ. ಸಾರ್ವಜನಿಕರೊಂದಿಗಿನ ಚಾಲ್ತಿಯಲ್ಲಿರುವ ಕರೆನ್ಸಿ 52,928 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಅಲ್ಲದೆ ನಗದು ವಹಿವಾಟಿನ ಮೇಲೆ ಜನರ ಅವಲಂಬನೆ ಹೆಚ್ಚಾಗಿದೆ ಎಂದು ಆರ್ ಬಿ ಐ ಅಂಕಿಅಂಶ ವಿವರಿಸಿದೆ.

ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಲಾಕ್‌ಡೌನ್‌ಗಳನ್ನು ಹೇರುವ ಭೀತಿಯಿಂದಾಗಿ ಸಾರ್ವಜನಿಕರೊಂದಿಗೆ ಚಲಾವಣೆಯಾಗುವ ಕರೆನ್ಸಿಯ ಹೆಚ್ಚಳವಾಗಿದೆ. ಕೋವಿಡ್ ಪ್ರಕರಣ ಹೆಚ್ಚಳದಿಂದಾಗಿ ಲಾಕ್‌ಡೌನ್‌ಗಳ ಭಯವು ವೈದ್ಯಕೀಯ ಅನಿವಾರ್ಯತೆ ಮತ್ತು ಅನಿಶ್ಚಿತ ಸಮಯದಲ್ಲಿ ಮೂಲಭೂತ ಅಗತ್ಯಗಳಿಗಾಗಿ ಜನರನ್ನು ಬ್ಯಾಂಕುಗಳಿಂದ ಹಣವನ್ನು ಹಿಂಪಡೆಯುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಸಾಂಕ್ರಮಿಕ ರೋಗ ಏಕಾಏಕಿ ಸಾರ್ವಜನಿಕರೊಂದಿಗೆ ಕರೆನ್ಸಿ ಹೆಚ್ಚುವಂತೆ ಮಾಡಿದೆ. ಕಳೆದ ಬಾರಿಯೂ ಕೊರೊನಾದ ಬಳಿಕ ಜುಲೈ 2020 ರ ಬಳಿಕ ಹಣ ಹಿಂಪಡೆಯುವಿಕೆಯ ಇಳಿಕೆಯತ್ತ ಸಾಗಿದ್ದರೂ ೨021ರ ಫೆಬ್ರವರಿ ತಿಂಗಳಿಂದ ಇದು ಮತ್ತೊಮ್ಮೆ ವೇಗವನ್ನು ಪಡೆದುಕೊಂಡಿದೆ ಎಂದು ಆರ್ ಬಿ ಐ ಅಂಕಿಅಂಶ ಮಾಹಿತಿ ಹೊರಗೆಡವಿದೆ.

ಕೊರೊನಾ ಲಾಕ್‌ಡೌನ್‌ ಸಂದರ್ಭ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸುತ್ತೇನೆ : ಸಚಿವ ಸೋಮಣ್ಣ