ಚೆನ್ನೈ: ಹೈದ್ರಾಬಾದ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಟೈ ಗೊಂಡಿದ್ದು, ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ - BC Suddi
ಚೆನ್ನೈ: ಹೈದ್ರಾಬಾದ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಟೈ ಗೊಂಡಿದ್ದು, ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ

ಚೆನ್ನೈ: ಹೈದ್ರಾಬಾದ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಟೈ ಗೊಂಡಿದ್ದು, ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದ ಡೆಲ್ಲಿ

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈದ್ರಾಬಾದ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಟೈ ಗೊಂಡಿದ್ದು, ಸೂಪರ್ ಓವರ್ ನಲ್ಲಿ ಡೆಲ್ಲಿ ಗೆದ್ದು ಬೀಗಿದೆ.14ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಟೈಯಲ್ಲಿ ಕೊನೆಗೊಂಡಂತಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಪ್ಪತ್ತು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಪ್ರಥ್ವಿ ಶಾ 53, ಶಿಖರ್ ಧವನ್ 28, ಪಂತ್ 37, ಸ್ಟೀವನ್ ಸ್ಮಿತ್ 34 ರನ್ ಗಳಿಸಿದರು. ಇನ್ನು ಗುರಿ ಬೆನ್ನತ್ತಿದ ಹೈದ್ರಾಬಾದ್ ತಂಡಕ್ಕೆ ಕೆನ್ ವಿಲಿಯಂ ಸನ್ ನೆರವಾದರು.

ಭರ್ಜರಿ 66 ರನ್ ಸಿಡಿಸಿದರು. ಬೈರ್ಸ್ಟ್ರೋಸ್ 38 ರನ್ ಗಳಿಸಿದರು. ಅಂತಿಮ ವಾಗಿ ಇಪ್ಪತ್ತು ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿಕೊಂಡಿತು. ಇನ್ನು ಡೆಲ್ಲಿ ಪರ ಸೂಪರ್ ಓವರ್ ಎಸೆದ ಅಕ್ಷರ್ ಪಟೇಲ್ ಕೇವಲ 7 ರನ್ ನೀಡಿದರು. ಇದನ್ನು ಪ್ರಯಾಸವಿಲ್ಲದ ಗುರಿ ಮುಟ್ಟುವ ಮೂಲಕ ಡೆಲ್ಲಿ ಗೆಲುವಿನ ನಗೆ ಚೆಲ್ಲಿತು.

 

 ಭಾರತಕ್ಕೆ ಲಸಿಕೆ ತಯಾರಿಕೆಗೆ ಕಚ್ಚಾ ಸಾಮಾಗ್ರಿ ಒದಗಿಸಿಲು ಮುಂದೆ ಬಂದ ಅಮೇರಿಕಾ