ಹೈದರಾಬಾದ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಂದಮ್ಮನಿಗೆ ಮರುಜನ್ಮ ನೀಡಿದ ಟಾಲಿವುಡ್‌ ಪ್ರಿನ್ಸ್‌ - BC Suddi
ಹೈದರಾಬಾದ್:  ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಂದಮ್ಮನಿಗೆ ಮರುಜನ್ಮ ನೀಡಿದ ಟಾಲಿವುಡ್‌ ಪ್ರಿನ್ಸ್‌

ಹೈದರಾಬಾದ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಂದಮ್ಮನಿಗೆ ಮರುಜನ್ಮ ನೀಡಿದ ಟಾಲಿವುಡ್‌ ಪ್ರಿನ್ಸ್‌

ಹೈದರಾಬಾದ್: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಂದಮ್ಮನಿಗೆ ಮರುಜನ್ಮ ನೀಡಿದ ಟಾಲಿವುಡ್‌ ನಟ ಮಹೇಶ್‌ ಬಾಬು ಅವರು ರೀಲ್‌ ಲೈಫ್‌‌ನಲ್ಲಿ ಮಾತ್ರವೇ ಅಲ್ಲ ರಿಯಲ್‌ ಲೈಫ್‌ನಲ್ಲೂ ಹೀರೋ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಟಿ.ಸುಪ್ರೀತಾ ಎನ್ನುವ ಹುಡುಗಿಗೆ ಮರುಜನ್ಮ ನೀಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸುಪ್ರೀತಾಳಿಗೆ ಸಹಾಯ ಹಸ್ತ ನೀಡಿದ್ದಾರೆ ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು.

ಮಹೇಶ್‌ ಬಾಬು ಅವರು ತಮ್ಮ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಹಲವಾರು ಸಾಮಾಜಿಕ ಕಾರ್ಯವನ್ನು ಮಾಡಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ಸಹಾಯ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದಾರೆ. ಟಾಲಿವುಡ್‌ ಪ್ರಿನ್ಸ್‌ನ ಈ ಕಾರ್ಯಕ್ಕೆ ಅವರ ಪತ್ನಿ ನಮೃತಾ ಅವರೂ ಕೂಡಾ ಸಾಥ್‌ ನೀಡಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಸುಪ್ರೀತಾಗೆ ಚಿಕಿತ್ಸೆ ಕೊಡಿಲು ಆಕೆಯ ಕುಟುಂಬ ಆರ್ಥಿಕವಾಗಿ ಶಕ್ತವಾಗಿರಲಿಲ್ಲ. ಈ ವಿಚಾರ ಮಹೇಶ್‌ ಬಾಬು ಅವರ ಗಮನಕ್ಕೆ ಬಂದಿದ್ದು, ಅವರು ಕೂಡಲೇ ಸ್ಪಂಧಿಸಿದ್ದು, ಮಗುವನ್ನು ಆಸ್ಪತ್ರೆಗೆ ರವಾನಿಸಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಮಹೇಶ್‌ ಬಾಬು ಅವರ ಪತ್ನಿ ನಮೃತಾ ಅವರು ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, “ಸುಪ್ರೀತಾ ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದಾಳೆ. ಆಕೆ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿದ್ದಾಳೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿಸಿದ ಆಂಧ್ರಪ್ರದೇಶ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದಗಳು” ಎಂದಿದ್ದಾರೆ.

error: Content is protected !!