ಹುಬ್ಬಳ್ಳಿಯಲ್ಲಿಪ್ರಯಾಣಿಕರ ಸೋಗಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ - BC Suddi
ಹುಬ್ಬಳ್ಳಿಯಲ್ಲಿಪ್ರಯಾಣಿಕರ ಸೋಗಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ

ಹುಬ್ಬಳ್ಳಿಯಲ್ಲಿಪ್ರಯಾಣಿಕರ ಸೋಗಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ

ಹುಬ್ಬಳ್ಳಿ : ಪ್ರಯಾಣಿಕನ ಸೋಗಿನಲ್ಲಿ ಬ್ಯಾಗಿನಲ್ಲಿ ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ್ ಸಿಸಿಬಿ ಹಾಗೂ ಸಿಇಎನ್ ಠಾಣೆಯ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇಹುಬ್ಬಳ್ಳಿಯ ಹೆಗ್ಗೇರಿ ಬಳಿ ಸ್ಕೂಟಿಯೊಂದಿಗೆ ಹೋಗುತ್ತಿದ್ದ ಆರೋಪಿ ತೌಫೀಕ ಅಹ್ಮದ ಸಲೀಂ ಸುದರ್ಜಿ ಎಂಬಾತನ ಮೇಲೆ ದಾಳಿ ಮಾಡಿದಾಗ, ಆತನ ಬ್ಯಾಗಿನಲ್ಲಿದ್ದ 5 ಕೆಜಿ. 200 ಗ್ರಾಂ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಾಗಾಟ ಮಾಡಲು ಬಳಕೆ ಮಾಡಿದ್ದ ಸ್ಕೂಟಿಯೊಂದಿಗೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೊತ್ತ 52 ಸಾವಿರ ಮೌಲ್ಯದಾಗಿದೆ.ಎಸಿಪಿ ಆರ್.ಕೆ.ಪಾಟೀಲ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.

error: Content is protected !!