ಹುಬ್ಬಳ್ಳಿಯಿಂದ ವಿಮಾನಗಳ ಆವರ್ತನವನ್ನು ಹೆಚ್ಚಿಸಿದ ಇಂಡಿಗೋ - BC Suddi
ಹುಬ್ಬಳ್ಳಿಯಿಂದ ವಿಮಾನಗಳ ಆವರ್ತನವನ್ನು ಹೆಚ್ಚಿಸಿದ ಇಂಡಿಗೋ

ಹುಬ್ಬಳ್ಳಿಯಿಂದ ವಿಮಾನಗಳ ಆವರ್ತನವನ್ನು ಹೆಚ್ಚಿಸಿದ ಇಂಡಿಗೋ

ಹುಬ್ಬಳ್ಳಿ: ಇಂಡಿಗೋ ವಿಮಾನ ಸೇವೆಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮತ್ತಷ್ಟು ವಿಮಾನ ಸೇವೆಯನ್ನು ಹೆಚ್ಚಿಸಿದೆ. ಡಿಜಿಸಿಎ ಬೇಸಿಗೆ ವೇಳಾಪಟ್ಟಿ ಮಾರ್ಚ್ 28ರಿಂದ ಪ್ರಾರಂಭವಾಗಿದೆ.ಇಂಡಿಗೋ ಹುಬ್ಬಳ್ಳಿ-ಕೊಚ್ಚಿ ಹಾರಾಟದ ಆವರ್ತನವನ್ನು ವಾರಕ್ಕೆ 6 ದಿನಗಳಿಂದ ಈಗ ವಾರದ ಏಳು ದಿನಕ್ಕೆ ಅವಧಿಯನ್ನು ವಿಸ್ತರಿಸಿದೆ. 6E- 7964 ವಿಮಾನವು ಬೆಳಿಗ್ಗೆ 8:35 ಕ್ಕೆ ಹುಬ್ಬಳ್ಳಿಯಿಂದ ಹೊರಟು ಬೆಳಿಗ್ಗೆ 10:20ಕ್ಕೆ ಕೊಚ್ಚಿ ತಲುಪಲಿದೆ.

6E- 7936 ವಿಮಾನವು ಕೊಚ್ಚಿಯಿಂದ ಬೆಳಿಗ್ಗೆ 10:50ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಇಂಡಿಗೋ ಹುಬ್ಬಳ್ಳಿ-ಗೋವಾ ಹಾರಾಟದ ಆವರ್ತನವನ್ನು ವಾರಕ್ಕೆ 6 ದಿನಗಳಿಂದ ಏಳು ದಿನಕ್ಕೆ ಹೆಚ್ಚಿಸಿದೆ. 6E-7995 ವಿಮಾನವು ಹುಬ್ಬಳ್ಳಿಯಿಂದ ಸಂಜೆ 5:55ಕ್ಕೆ ಹೊರಟು ಗೋವಾವನ್ನು ಸಂಜೆ 6:40ಗೆ ತಲುಪಲಿದೆ. ಮತ್ತು 6E- 7996 ವಿಮಾನವು ಗೋವಾದಿಂದ ಸಂಜೆ 7:10ಕ್ಕೆ ಹೊರಟು ರಾತ್ರಿ 8:00ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಇಂಡಿಗೊ ಹುಬ್ಬಳ್ಳಿ-ಕಣ್ಣೂರು ಹಾರಾಟದ ಆವರ್ತನವನ್ನು ವಾರಕ್ಕೆ 3 ದಿನಗಳಿಂದ 6 ದಿನಗಳಿಗೆ ಹೆಚ್ಚಿಸಿದೆ. 6E- 7981 ವಿಮಾನವು ಬೆಳಿಗ್ಗೆ 7:50 ಕ್ಕೆ ಹುಬ್ಬಳ್ಳಿಯಿಂದ ಹೊರಟು 9:10 ಕ್ಕೆ ಕಣ್ಣೂರು ತಲುಪಲಿದೆ.

ಮತ್ತು 6E- 7979 ವಿಮಾನವು ಕಣ್ಣೂರಿನಿಂದ ಬೆಳಿಗ್ಗೆ 9: 30 ಕ್ಕೆ ಹೊರಟು ಬೆಳಿಗ್ಗೆ 10:50ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ವಿಮಾನ ಕಾರ್ಯನಿರ್ವಹಿಸಲಿದೆ. ಪ್ರಿ-ಕೋವಿಡ್ ಮಟ್ಟಕ್ಕೆ ವಾಯು ಸಂಚಾರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಕಾರ್ಗೋ ಟರ್ಮಿನಲ್ ಸೇರ್ಪಡೆ ಹುಬ್ಬಳ್ಳಿಗೆ ಹೆಚ್ಚಿನ ಮಾರ್ಗಗಳನ್ನು ಪಡೆಯಲು ಸಹಾಯ ಮಾಡುತ್ತದೆ. ದೆಹಲಿ, ಪುಣೆ, ಜೈಪುರ, ಮತ್ತು ಶಿರಡಿಗೆ ನೇರ ವಿಮಾನಯಾನ ಮಾಡುವ ಬೇಡಿಕೆ ಇದೆ. ಅಲ್ಲದೆ, ಟ್ರೂಜೆಟ್ ಜೂನ್ 2021ರಿಂದ ಹುಬ್ಬಳ್ಳಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

error: Content is protected !!