ಹುಬ್ಬಳ್ಳಿ: ಕಂದಾಯ ಸಚಿವ ಸಚಿವ ಆರ್.ಆಶೋಕ ಅವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು,ರಸ್ತೆಗಳಲ್ಲಿ ರಂಗೋಲಿ ಹಾಕಿ ಸಚಿವರ ಸ್ವಾಗತಕ್ಕೆ ಗ್ರಾಮಸ್ಥರು ಸಿದ್ಧರಾಗಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧ ಪಡಿಸಲಾಗಿದ್ದು,ಗ್ರಾಮದ ಸಿದ್ಧಾರೂಢ ಮಠಕ್ಕೆ ಭೇಟಿ ಬಳಿಕ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಆಗಮಿಸಲಿದ್ದಾರೆ.
ಅಲ್ಲಿಂದ ದಲಿತ-ಕೇರಿಗೆ ಭೇಟಿ ದಲಿತ ಕುಟುಂಬಗಳ ಜೊತೆ ಸಂವಾದ. ನ0ತರ ಅಂಗವೈಕಲ್ಯ ತುತ್ತಾದವರಿಗೆ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ,ಅದಾದ ಬಳಿಕ ಛಬ್ಬಿ ಗ್ರಾಮ ನಾಡಾ ಕಚೇರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ರಾತ್ರಿ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿರುವ ಕಂದಾಯ ಸಚಿವ ಆರ್.ಆಶೋಕ. ಸಂಜೆ ಗ್ರಾಮಸ್ಥೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.