ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ನಾನು ಬರುತ್ತೇನೆ: ಡಿ.ಕೆ. ಶಿವಕುಮಾರ್ - BC Suddi
ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ನಾನು ಬರುತ್ತೇನೆ: ಡಿ.ಕೆ. ಶಿವಕುಮಾರ್

ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ನಾನು ಬರುತ್ತೇನೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿ ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ನಾನು ಬರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೋವಿಡ್ ನಿಂದ ಸಾವನ್ನಪ್ಪಿದವರ ಅಂತಿಮ ಸಂಸ್ಕಾರ ಸರ್ಕಾರಿ ಜಾಗದಲ್ಲಿ ಗೌರವಯುತವಾಗಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೂ ಅಡ್ಡಿಯಾಗುತ್ತಿರುವ ವಿಚಾರ ಕಂದಾಯ ಸಚಿವರಿಗೆ ತಿಳಿಯಬೇಕಿದೆ. ಸರತಿ ಸಾಲಿನಲ್ಲಿ ನಿಂತಿ ಶವ ಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ಇದೆ. ಸರಕಾರ ಕೋವಿಡ್ ನಿಂದ ಮೃತಪಟ್ಟವರನ್ನು ಪರಿಶೀಲಿಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಭೆ ನಡೆಸಿ ಕಾಲಹರಣ ಮಾಡುವ ಸಮಯವಲ್ಲ. ಸರಕಾರ ಅದನ್ನು ಬಿಟ್ಟು ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಫೀಲ್ಡಿಗಿಳಿದು ಕರ್ತವ್ಯ ನಿರ್ವಹಿಸುವ ಸಮಯ ಬಂದಿದೆ ಎಂದು ಅವರು ಟೀಕಿಸಿದರು.

ಇನ್ನು ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ನಾನು ಸಿದ್ಧನಿದ್ದೇನೆ. ಬನ್ನಿ ವಾಸ್ತವಾಂಶ ಅರಿಯೋಣ. ಬೇರೆ ರಾಜ್ಯದ ಪರಿಸ್ಥಿತಿಯೇ ಬೇರೆ . ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ ಎಂದಿದ್ದಾರೆ.

ಕೇಜ್ರಿವಾಲ್ ಮಡದಿಗೆ ಕೊರೊನಾ ಸೋಂಕು ದೃಢ : ಸಿಎಂ ಕ್ವಾರಂಟೈನ್