ನವದೆಹಲಿ: ಆಕ್ಸಿಜನ್‌ಗಾಗಿ ಆಸ್ಪತ್ರೆ ಗೋಡೆ ಒಡೆದು ಪವಾಡದಂತೆ 100 ರೋಗಿಗಳ ಜೀವ ರಕ್ಷಣೆ - BC Suddi
ನವದೆಹಲಿ: ಆಕ್ಸಿಜನ್‌ಗಾಗಿ ಆಸ್ಪತ್ರೆ ಗೋಡೆ ಒಡೆದು ಪವಾಡದಂತೆ 100 ರೋಗಿಗಳ ಜೀವ ರಕ್ಷಣೆ

ನವದೆಹಲಿ: ಆಕ್ಸಿಜನ್‌ಗಾಗಿ ಆಸ್ಪತ್ರೆ ಗೋಡೆ ಒಡೆದು ಪವಾಡದಂತೆ 100 ರೋಗಿಗಳ ಜೀವ ರಕ್ಷಣೆ

ನವದೆಹಲಿ: ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೊನಾ ರೋಗಿಗಳಿಗೆ ಆಕ್ಸಿಜನ್‌ ಸಿಗದೆ ದೆಹಲಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕೊನೆಯ ಕ್ಷಣದಲ್ಲಿ ಪವಾಡದಂತೆ 100 ರೋಗಿಗಳ ಜೀವ ಉಳಿದ ಘಟನೆ ನಡೆದಿದೆ.

ದೆಹಲಿಯ ಸರೋಜ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 130ಕ್ಕೂ ಅಧಿಕ ಕೊರೊನಾ ರೋಗಿಗಳು ಕೃತಕ ಆಕ್ಸಿಜನ್‌ ಪಡೆಯುತ್ತಿದ್ದರು. ಶನಿವಾರ ಸಂಜೆ ಆಕ್ಸಿಜನ್‌ ಮುಗಿಯುತ್ತಾ ಬಂದಿತ್ತು. ಎಲ್ಲಿ ಹುಡುಕಿದರೂ ಆಕ್ಸಿಜನ್‌ ಸಿಲಿಂಡರ್‌ಗಳು ಸಿಗಲಿಲ್ಲ. ಆಗ ಆಸ್ಪತ್ರೆಯವರು ರೋಗಿಗಳ ಸಂಬಂಧಿಕರಿಗೆ ವಿಷಯ ತಿಳಿಸಿ 34 ರೋಗಿಗಳನ್ನು ಬೇರೆಡೆಗೆ ಶಿಫ್ಟ್‌ ಮಾಡಿಸಿದರು. ಆದರೆ, ಇನ್ನುಳಿದ 100 ರೋಗಿಗಳನ್ನು ಎಲ್ಲಿಗೂ ಕರೆದುಕೊಂಡು ಹೋಗುವಂತಿರಲಿಲ್ಲ.

ಇನ್ನು ಪೊಲೀಸರ ನೆರವು ಪಡೆದ ರೋಗಿಗಳ ಸಂಬಂಧಿಕರು 20 ಸಿಲಿಂಡರ್‌ಗಳ ವ್ಯವಸ್ಥೆ ಮಾಡಿದ್ದು, ಆ ಮೂಲಕ ರೋಗಿಗಳು 40 ನಿಮಿಷ ಉಸಿರಾಡಿದರು. ಬಳಿಕ ಮೇಯರ್‌, ಸರ್ಕಾರ, ಪೊಲೀಸ್‌ ಇಲಾಖೆಯ ಮತ್ತು ಆಸ್ಪತ್ರೆಯ ಪ್ರಯತ್ನದಿಂದ ಒಂದು ಆಕ್ಸಿಜನ್‌ ಟ್ಯಾಂಕರ್‌ ದೊರೆಯಿತು. ಅದು ಆಸ್ಪತ್ರೆಗೆ ಬಂದಾಗ ಕಾಂಪೌಂಡ್‌ನೊಳಗಿರುವ ಆಕ್ಸಿಜನ್‌ ಟ್ಯಾಂಕ್‌ನ ಬಳಿಗೆ ಹೋಗಲಾಗದಷ್ಟುದೊಡ್ಡದಾಗಿದ್ದು, ಬಳಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ಸಿಕ್ಕಸಿಕ್ಕಿದ್ದನ್ನೆಲ್ಲಾ ತಂದು ಕಾಂಪೌಂಡ್‌ ಒಡೆಯತೊಡಗಿದರು. ಆದಾಗಲೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಮುಗಿದುಹೋಗುತ್ತಿದೆ, ರೋಗಿಗಳು ಉಳಿಯುವುದಿಲ್ಲ ಎಂದು ಡಾಕ್ಟರ್‌ಗಳು, ನರ್ಸ್‌ಗಳೂ ಹೇಳಿದ್ದು, ಕೊನೆಯ ಕ್ಷಣದಲ್ಲಿ ಜೆಸಿಬಿ ಕರೆಸಿ ಕಾಂಪೌಂಡ್‌ ಒಡೆಸಿ ಟ್ಯಾಂಕರ್‌ ಅನ್ನು ಆಕ್ಸಿಜನ್‌ ಟ್ಯಾಂಕ್‌ ಬಳಿಗೆ ಒಯ್ಯಲಾಯಿತು.

ಈ ಕುರಿತು ಮಾತನಾಡಿರುವ ಆಸ್ಪತ್ರೆಯ ಮಾಲಿಕ ಪಂಕಜ್‌ ಚಾವ್ಲಾ, “ಜೈಪುರದಲ್ಲಿ ಆಕ್ಸಿಜನ್‌ ಸಿಗದೆ 20ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಕ್ಕಿಂತ ದೊಡ್ಡ ದುರಂತ ನಮ್ಮ ಆಸ್ಪತ್ರೆಯಲ್ಲಿ ಸಂಭವಿಸುತ್ತಿತ್ತು, ಆದರೆ ಎಲ್ಲರ ಪ್ರಯತ್ನದಿಂದ ಕೊನೆಗೆ ಎಲ್ಲರ ಜೀವ ಉಳಿಯಿತು” ಎಂದಿದ್ದಾರೆ.

ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ: ಲಾಕ್ ಡೌನ್ ಬಗ್ಗೆ ಚರ್ಚೆ