ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎದೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನವದೆಹಲಿಯ ಆರ್ಮಿ ರಿಸರ್ಚ್ ಅಂಡ್ ರೆಫರಲ್ (ಆರ್ ಆಯಂಡ್ ಆರ್) ಆಸ್ಪತ್ರೆ ತಿಳಿಸಿದೆ.
ರಾಷ್ಟ್ರಪತಿಗಳು ದೈನಂದಿನ ಪರೀಕ್ಷೆಗೆ ಒಳಪಡಿದ್ದು, ಈಗ ತೀವ್ರ ನಿಗಾ ಘಟಕದಲ್ಲಿದ್ದಾರೆ. ಎಂದು ಆಸ್ಪತ್ರೆ ತಿಳಿಸಿದೆ. ‘ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನವದೆಹಲಿಯ ಸೇನಾ ಆಸ್ಪತ್ರೆಗೆ (ಆರ್ ಆಯಂಡ್ ಆರ್) ದಾಖಲಿಸಲಾಗಿದೆ.ಸದ್ಯ ಅವರು ತಪಾಸಣೆಗೆ ಒಳಗಿದ್ದು, ನಿಗಾ ಲ್ಲಿರಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರ್ ಆಯಂಡ್ ಆರ್ ಆಸ್ಪತ್ರೆಯ ವೈದ್ಯಕೀಯ ವರದಿ ತಿಳಿಸಿದೆ.