ಹರಿಯಾಣ: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಮಹಿಳೆಯನ್ನು ಅಪಹರಿಸಿ ಕ್ಯಾಬ್‌ ಚಾಲಕ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ - BC Suddi
ಹರಿಯಾಣ: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಮಹಿಳೆಯನ್ನು ಅಪಹರಿಸಿ ಕ್ಯಾಬ್‌ ಚಾಲಕ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ

ಹರಿಯಾಣ: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಮಹಿಳೆಯನ್ನು ಅಪಹರಿಸಿ ಕ್ಯಾಬ್‌ ಚಾಲಕ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ

ಗುರುಗ್ರಾಮ್: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಮಹಿಳೆಯನ್ನು ಅಪಹರಿಸಿ ಕ್ಯಾಬ್‌ ಚಾಲಕ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ವೆಸಗಿದ ಘಟನ ಹರಿಯಾಣದಲ್ಲಿ ನಡೆದಿದೆ. 24 ವರ್ಷದ ಯುವತಿ ನೈಟ್‌ ಶಿಫ್ಟ್‌ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದಳು. ಯುವತಿ ಬೆಳಗಿನಜಾವ 3 ಗಂಟೆಗೆ ಇಫ್ಕೋ ಚೌಕ್‌ನಿಂದ ಕ್ಯಾಬ್‌‌‌‌‌ನಲ್ಲಿ ಹತ್ತಿದ್ದು, ಈ ವೇಳೆ ಆಕೆಯನ್ನು ಮೂವರು ಅಪಹರಿಸಿ ಝಜ್ಜರ್‌ ಜಿಲ್ಲೆಯ ನಿರ್ಜನ ಪ್ರದೇಶದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

“ಕ್ಯಾಬ್‌ ಝಜ್ಜರ್‌‌‌‌ ತಲುಪಿದ ವೇಳೆ ಮೂವರು ಆರೋಪಿಗಳು ಮತ್ತೆ ಇಬ್ಬರನ್ನು ಕ್ಯಾಬ್‌ಗೆ ಹತ್ತಿಸಿಕೊಂಡಿದ್ದಾರೆ. ಅತ್ಯಾಚಾರ ಎಸಗುವ ಮುನ್ನ ಆರೋಪಿಗಳು ಮದ್ಯ ಸೇವಿಸಿದ್ದು, ಆಕೆಯನ್ನು ಕ್ಯಾಬ್‌ನಲ್ಲಿ ಲಾಕ್‌ ಮಾಡಿದ್ದಾರೆ. ಆರೋಪಿಗಳು ಬೆಳಗ್ಗಿನವರೆಗೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಬಳಿಕ ಫಾರೂಕ್ ನಗರ ಸಮೀಪ ಆಕೆಯನ್ನು ಎಸೆದು ಪರಾರಿಯಾಗಿದ್ದಾರೆ. ಬಳಿಕ ಯುವತಿ ನೆರವಿಗಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಆರೋಪಿಗಳ ಪೈಕಿ ಕೆಲವರ ಹೆಸರನ್ನು ಯುವತಿ ಹೇಳಿದ್ದಾಳೆ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಯುವತು ದ್ವಾರಕಾ ನಿವಾಸಿಯಾಗಿದ್ದು, ಆಕೆ ಗುರುಗ್ರಾಮದ ಎಂಜಿ ರಸ್ತೆಯ ಮಾಲ್‌‌ನಲ್ಲಿ ಕೆಲಸ ಮಾಡುತ್ತಿದ್ದಳು. ರವಿವಾರ ರಾತ್ರಿ ಇಫ್ಕೋ ಚೌಕ್‌‌ಗೆ ಹೋಗಿ ಕ್ಯಾಬ್‌‌ಗೆ ಕಾಯುತ್ತಿದ್ದ ಸಂದರ್ಭ ಕ್ಯಾಬ್‌‌ ಚಾಲಕ ಆಕೆಯನ್ನು ದ್ವಾರಕಾ ರೋಡ್‌ನಲ್ಲಿ ಇಳಿಸುವುದಾಗಿ ಒಪ್ಪಿಕೊಂಡ ಕಾರಣ ಯುವತಿ ಕ್ಯಾಬ್‌ ಹತ್ತಿದ್ದಾಳೆ.

“ಕ್ಯಾಬ್‌‌ಗೆ‌ ಹತ್ತಿದ ಯುವತಿ ಕೆಲವೇ ಸಮಯದಲ್ಲಿ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಕ್ಯಾಬ್‌ ಚಾಲಕ ಬೇರೆ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಪ್ರಶ್ನಿಸಿದ್ದ ಯುವತಿಗೆ ಆತ ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಅಪಹರಭ ಮಾಡಿ ಅತ್ಯಾಚಾರ ಎಸಗಿದ್ದಾರೆ” ಎಂದು ಯುವತಿ ಹೇಳಿದ್ದಾಳೆ.

‘ಕಮಲದ ಕುಟುಂಬ ರಾಜಕಾರಣ’: ವಂಶವೃಕ್ಷದ ಪೋಟೋ ಶೇರ್ ಮಾಡಿದ ಕಾಂಗ್ರೆಸ್

error: Content is protected !!