ಮನೆ ಮನೆಗೆ ಕೊರೊನಾ ಲಸಿಕೆ - ಕೇಂದ್ರ ಸರ್ಕಾರ ಅಸಮ್ಮತಿ - BC Suddi
ಮನೆ ಮನೆಗೆ ಕೊರೊನಾ ಲಸಿಕೆ – ಕೇಂದ್ರ ಸರ್ಕಾರ ಅಸಮ್ಮತಿ

ಮನೆ ಮನೆಗೆ ಕೊರೊನಾ ಲಸಿಕೆ – ಕೇಂದ್ರ ಸರ್ಕಾರ ಅಸಮ್ಮತಿ

ಮುಂಬೈ:  ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆಯಾಗುತ್ತಿದೆ. ಏತನ್ಮಧ್ಯೆ ಮನೆ ಮನೆಗೆ ಕೊರೊನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ನಕಾರ ಸೂಚಿಸಿದೆ.

ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಸುಮಾರು 1.5 ಲಕ್ಷ ಜನರು ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಾಗಿದ್ದು, ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಲಸಿಕೆ ಪಡೆಯಲು ಅನುಕೂಲವಾಗಲು ಮನೆ ಮನೆಗೆ ತೆರಳಿ ಲಸಿಕೆ ನೀಡಲು ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಆದರೆ ಈ ಮನವಿಗೆ ಸಮ್ಮತಿಸದ ಕೇಂದ್ರ ಆರೋಗ್ಯ ಸಚಿವಾಲಯ, ಈ ರೀತಿಯ ಯಾವುದೇ ನೀತಿಯೂ ಈವರೆಗ ರೂಪಿಸಿಲ್ಲ. ಬೇಕಾದರೆ ಬೂತ್‌ ಮಟ್ಟದಲ್ಲೇ ಲಸಿಕೆ ನೀಡುವ ಕಾರ್ಯಕ್ರಮವನ್ನು ವಿಸ್ತಿರಿಸಲಾಗುತ್ತದೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಸಿ ಹೆಚ್ಚುವರಿ ಮುನ್ಸಿಪಲ್ ಆಯುಕ್ತ ಸುರೇಶ್ ಕಾಕನಿ, ಮನೆ ಮನೆಗೆ ತೆರಳಿ ಲಸಿಕೆ ನೀಡಲು ಕೇಂದ್ರ ಸರ್ಕಾರದ ಅನುಮತಿ ಕೋರಲಾಗಿದ್ದು ಆದರೆ ಸರ್ಕಾರ ಈ ರೀತಿಯ ಯಾವುದೇ ನೀತಿ ಇಲ್ಲವೆಂದು ತಿಳಿಸಿದೆ ಎಂದು ಹೇಳಿದ್ದಾರೆ.

error: Content is protected !!