ಉತ್ತರ ಪ್ರದೇಶ: ನೋಯ್ಡಾ ಒಳಗೊಂಡಂತೆ ಗಾಜಿಯಾಬಾದ್ ನಲ್ಲಿ ಮುಂಬರುವ ಮೇ 25 ರ ವರೆಗೆ ಸೆಕ್ಷನ್144 ಜಾರಿ - BC Suddi
ಉತ್ತರ ಪ್ರದೇಶ: ನೋಯ್ಡಾ ಒಳಗೊಂಡಂತೆ ಗಾಜಿಯಾಬಾದ್ ನಲ್ಲಿ ಮುಂಬರುವ ಮೇ 25 ರ ವರೆಗೆ ಸೆಕ್ಷನ್144  ಜಾರಿ

ಉತ್ತರ ಪ್ರದೇಶ: ನೋಯ್ಡಾ ಒಳಗೊಂಡಂತೆ ಗಾಜಿಯಾಬಾದ್ ನಲ್ಲಿ ಮುಂಬರುವ ಮೇ 25 ರ ವರೆಗೆ ಸೆಕ್ಷನ್144 ಜಾರಿ

ನವದೆಹಲಿ: ದಿನ ಕಳೆದಂತೆ ಕೋವಿಡ್ ಸೋಂಕಿನ ಪ್ರಕರಣ ಜಾಸ್ತಿಯಾಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ನೋಯ್ಡಾ ಒಳಗೊಂಡಂತೆ ಗಾಜಿಯಾಬಾದ್ ನಲ್ಲಿ ಮುಂಬರುವ ಮೇ 25 ರ ವರೆಗೆ ಸೆಕ್ಷನ್144 ಅನ್ನು ಜಾರಿಗೆ ತರಲಾಗಿದೆ. ಈ ಕುರಿತಾಗಿ ಆದೇಶ ಹೊರಡಿಸಿರುವ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಅಜಯ್ ಶಂಕರ್ ಪಾಂಡೆ, ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಡುವೆ ಮುಂಬರುವ ಹೋಳಿ ಹಬ್ಬದ ಆಚರಣೆಯ ವೇಳೆ ಕೋವಿಡ್ ಸೋಂಕಿನ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಇದನ್ನು ತಡೆಯಲು ಈ ಆದೇಶವನ್ನು ಹೊರಡಿಸಲಾಗಿದೆ ಎನ್ನಲಾಗಿದ್ದು, 5 ಜನರಿಗಿಂತ ಅಧಿಕ ಜನರು ಒಂದು ಕಡೆ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಶಾಪಿಂಗ್ ಮಾಲ್ ಗಳು, ಶಾಲೆಗಳು ಸೇರಿದಂತೆ ಎಲ್ಲಾ ವಿಧವಾದ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು. ಮಾಸ್ಕ್ ಧರಿಸದವರಿಗೆ ಎಲ್ಲಾ ವಿಧವಾದ ಸಾರ್ವಜನಿಕ ಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರ ,ಪಂಜಾಬ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ.

ಈ ಸಭೆಯಲ್ಲಿ ಅವರು ನಾವು ಮುಂಬರಲಿರುವ ಕೋವಿಡ್ ಸೋಂಕಿನ ಎರಡನೆ ಅಲೆಯನ್ನು ತಡೆಯಬೇಕಾಗಿದ್ದು ಇದಕ್ಕಾಗಿ ನಿರ್ಣಾಯಕ ಹೆಜ್ಜೆಯೊಂದನ್ನು ಇಡಬೇಕಾಗಿದೆ ಎಂದಿದ್ದಾರೆ. ಉತ್ತರ ಪ್ರದೇಶ ಮತ್ತು ಗಾಜಿಯಾಬಾದ್ ನಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿದ್ದು ಪ್ರಸ್ತುತ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,05 ,655ನ್ನು ತಲುಪಿದೆ.

 

error: Content is protected !!