ಬೆಂಗಳೂರು: ಯುಗಾದಿ, ಹೋಳಿ, ಶಬ್ ಎ ಬರಾತ್, ಈಸ್ಟರ್ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ - BC Suddi
ಬೆಂಗಳೂರು: ಯುಗಾದಿ, ಹೋಳಿ, ಶಬ್ ಎ ಬರಾತ್, ಈಸ್ಟರ್ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ

ಬೆಂಗಳೂರು: ಯುಗಾದಿ, ಹೋಳಿ, ಶಬ್ ಎ ಬರಾತ್, ಈಸ್ಟರ್ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ

ಬೆಂಗಳೂರು: ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ನೂತನ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಮುಂಬರುವ ಧಾರ್ಮಿಕ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ ಹೇರಲಾಗಿದೆ. ಇದರ ಪ್ರಕಾರ ಪ್ರಮುಖವಾಗಿ ಯುಗಾದಿ, ಹೋಳಿ, ಶಬ್ ಎ ಬರಾತ್, ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳ ಆಚರಣೆಗೆ ಕುತ್ತುಂಟಾಗಲಿದೆ.

ಸಿಡಿ ಪ್ರಕರಣ ಹೊರಬಂದು 1 ತಿಂಗಳಾದ್ರೂ ಎಫ್‌ಐಆರ್‌ ಆಗಿಲ್ಲ, ಬಿಲ್ಡಪ್‌ಬೊಮ್ಮಾಯಿ ಯುವತಿಗೆ ರಕ್ಷಣೆ ನೀಡಿಲ್ಲ: ಕಾಂಗ್ರೆಸ್‌ ಟೀಕೆ

ಈ ಎಲ್ಲಾ ಹಬ್ಬಗಳನ್ನು ಪಾರ್ಕ್, ಮಾರ್ಕೆಟ್, ಮೈದಾನ, ಪ್ರಾರ್ಥನಾ ಕೇಂದ್ರಗಳು, ಧಾರ್ಮಿಕ ಕೇಂದ್ರದಲ್ಲಿ ಆಚರಣೆಗೆ ನಿಷೇಧ ವಿಧಿಸಿದಲಾಗಿದೆ. ಒಂದೊಮ್ಮೆ ನಿಯಮ ಉಲ್ಲಂಘಿಸಿ ಹಬ್ಬಗಳನ್ನು ಆಚರಿಸಿದ್ದಲ್ಲಿ, ಅವರ ವಿರುದ್ಧ ಎನ್ ಡಿಎಂಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಕೊರೋನಾ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಜನ ಗುಂಪು ಸೇರುವುದಕ್ಕೆ ನಿಷೇಧ ವಿಧಿಸಲಾಗಿದೆ. ಇನ್ನುಳಿದಂತೆ ಮದುವೆ ಸೇರಿದಂತೆ ಕಾರ್ಯಕ್ರಮಗಳಿಗೆ ಜನ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

error: Content is protected !!