ಹೆಲ್ಮೆಟ್ ಧರಿಸದೇ ರಾಯಲ್ ಎನ್ ಫೀಲ್ಡ್ ಓಡಿಸಿದ ಶಾಸಕರು : ಜನರ ಆಕ್ರೋಶ - BC Suddi
ಹೆಲ್ಮೆಟ್ ಧರಿಸದೇ ರಾಯಲ್ ಎನ್ ಫೀಲ್ಡ್ ಓಡಿಸಿದ ಶಾಸಕರು : ಜನರ ಆಕ್ರೋಶ

ಹೆಲ್ಮೆಟ್ ಧರಿಸದೇ ರಾಯಲ್ ಎನ್ ಫೀಲ್ಡ್ ಓಡಿಸಿದ ಶಾಸಕರು : ಜನರ ಆಕ್ರೋಶ

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದಲ್ಲಿ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದ್ರೆ, ಈ ವೇಳೆ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೊನ್ನಾಳಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರಾದ ಪದ್ಮಾ ರಂಗನಾಥ್ ಅವರು ತನ್ನ ಮಕ್ಕಳಾದ ಆಕಾಶ್, ಅಕ್ಷಯ್ ಗೆ ರಾಯಲ್ ಎನ್ ಫಿಲ್ಡ್ ಹೊಸ ಬೈಕ್ ಕೊಡಿಸಿದ್ದರು. ಈ ಬೈಕ್ ಅನ್ನು ಪಟ್ಟಣದ ರೇಣುಕಾಚಾರ್ಯ ಮನೆಗೆ ತಂದಿದ್ದರು. ಈ ವೇಳೆ ಅವರ ಕೋರಿಕೆಯ ಮೇರೆಗೆ ರೇಣುಕಾಚಾರ್ಯ ಬೈಕ್ ಸವಾರಿ ಮಾಡಿದರು. ಆದ್ರೆ, ಈ ವೇಳೆ ಮುನ್ನೆಚ್ಚರಿಕಾ ಕ್ರಮ  ಅನುಸರಿಸದೇ ಬೈಕ್ ರೈಡ್ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇನ್ನು ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿಯ ಬಗ್ಗೆ ಪರಿಶೀಲಿಸಲು ಕುಂಬಳೂರು ಗ್ರಾಮಕ್ಕೆ ತೆರಳಿದ್ದರು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಹಿರೇಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, 329 ಮಂದಿಗೆ ಉದ್ಯೋಗ ಸಿಕ್ಕಿದೆ. ಈ ವೇಳೆ ರೇಣುಕಾಚಾರ್ಯ ಅವರೇ ಸ್ವತಃ ಕೂಲಿ ಕೆಲಸ ಮಾಡುವ ಜೊತೆಗೆ ಹಾರೆ ಹಿಡಿದು ಮಣ್ಣು ತೆಗೆಯುವ ಮೂಲಕ ಗಮನ ಸೆಳೆದರು.

error: Content is protected !!